ನವದೆಹಲಿ: ಸಂವಿಧಾನದ ಪ್ರತಿಯೊಂದು ಸಂಸ್ಥೆಗಳನ್ನೂ ಸಂಘಪರಿವಾರ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಆರ್ ಎಸ್ಎಸ್ ನ ತನ್ನ ವ್ಯಕ್ತಿಗಳನ್ನು ಪ್ರತಿ ಇಲಾಖೆಯಲ್ಲೂ ಸೇರಿಸಿದ್ದು ಎನ್ ಡಿಎ ಸರ್ಕಾರದ ಸಚಿವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದೇ ವೇಳೆ ನೋಟು ನಿಷೇಧ ಸಂಘಪರಿವಾರದ ಚಿಂತನೆ ಎಂದು ಹೇಳಿರುವ ರಾಹುಲ್ ಗಾಂಧಿ, ನೋಟು ನಿಷೇಧದ ಯೋಜನೆಯನ್ನು ಸಂಘಪರಿವಾರವೇ ಪ್ರಧಾನಿ ಮೋದಿಗೆ ಸೂಚಿಸಿರುವುದು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರತಿ ಇಲಾಖೆಯಲ್ಲಿಯೂ ಸಚಿವರುಗಳಿಗೆ ಆರ್ಎಸ್ಎಸ್ ನ ವ್ಯಕ್ತಿಗಳು ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕರ್ನಾಟಕದಲ್ಲಿ ಉದ್ಯಮಿಗಳ ಸಮುದಾಯದೊಂದಿಗೆ ನಡೆಸಿದ ಸಂವಹನದ ವೇಳೆ ಹೇಳಿದ್ದಾರೆ.