ಬೆಂಗಳೂರು: ಗೋದಾಮಿಗೆ ಬೆಂಕಿ- ಇಬ್ಬರ ಸಜೀವ ದಹನ

ಗಾರ್ಮೆಂಟ್ಸ್ ಗಳಲ್ಲಿ ಬಳಕೆಗೆ ಬಾರದ ಬಟ್ಟೆಗಳನ್ನು ಮರುಬಳಕೆ ಮಾಡುವ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ, ಇಬ್ಬರು ಕಾರ್ಮಿಕರು ಸಜೀವ ಹದನವಾಗಿರುವ ಘಟನೆ ನಗರ ಚಂದ್ರಾ ಲೇಔಟ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ...
ಬೆಂಗಳೂರು: ಗೋದಾಮಿಗೆ ಬೆಂಕಿ- ಇಬ್ಬರ ಸಜೀವ ದಹನ
ಬೆಂಗಳೂರು: ಗೋದಾಮಿಗೆ ಬೆಂಕಿ- ಇಬ್ಬರ ಸಜೀವ ದಹನ
ಬೆಂಗಳೂರು: ಗಾರ್ಮೆಂಟ್ಸ್ ಗಳಲ್ಲಿ ಬಳಕೆಗೆ ಬಾರದ ಬಟ್ಟೆಗಳನ್ನು ಮರುಬಳಕೆ ಮಾಡುವ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ, ಇಬ್ಬರು ಕಾರ್ಮಿಕರು ಸಜೀವ ಹದನವಾಗಿರುವ ಘಟನೆ ನಗರ ಚಂದ್ರಾ ಲೇಔಟ್ ನಲ್ಲಿ ಸೋಮವಾರ ರಾತ್ರಿ ನಡೆದಿದೆ. 
ಮೃತಪಟ್ಟಿರುವ ಇಬ್ಬರ ಪೈಕಿ ಒಬ್ಬರನ್ನು ಮೈಸೂರಿನ ಕೆ.ಆರ್. ನಗರ ತಾಲೂಕಿನ ಮೇಲೂರು ಗ್ರಾಮದ ಮಂಜುನಾಥ್ (24) ಎಂದು ಗುರ್ತಿಸಲಾಗಿದೆ. ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಗೋದಾಮಿಗೆ ಬೆಂಕಿ ಬಿದ್ದ ವೇಳೆ ವ್ಯಕ್ತಿಯೋರ್ವ ಸ್ಥಳದಿಂದ ಓಡಿ ಹೋಗಿದ್ದಾನೆಂದು ಸ್ಥಳೀಯರು ಹೇಳಿದ್ದಾರೆ. ಆತನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆ ಬಳಿಕ ಗೋದಾಮಿನ ಮಾಲೀಕ ನಾಸೀರ್ ಕೂಡ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 
ಸುವರ್ಣ ಲೇಔಟ್ ನಲ್ಲಿ ವೆಂಕಟಪ್ಪ ಎಂಬುವವರಿಗೆ ಸೇರಿದ 28*50 ಅಡಿ ವಿಸ್ತೀರ್ಣದ ಖಾಲಿ ಸ್ಥಳವಿದೆ. ಈ ಸ್ಥಳವನ್ನು ಬಾಡಿಗೆ ಪಡೆದಿದ್ದ ನಾಸೀರ್ ತಗಡಿನ ಶೆಡ್ ನಿರ್ಮಿಸಿ, ಗೋಡೌನ್ ಮಾಡಿಕೊಂಡಿದ್ದ. ಗಾರ್ಮೆಂಟ್ಸ್'ಗಳಲ್ಲಿ ಉಪಯೋಗಕ್ಕೆ ಬಾರದ ಚಿಂದಿ ಬಟ್ಟೆಗಳನ್ನು ಗೋದಾಮಿನಲ್ಲಿ ಶೇಖರಿಸಿಟ್ಟು, ಮರು ಬಳಕ ಮಾಡಲು ಬೆರೆಡೆ ಕೊಂಡೊಯ್ಯಲಾಗುತ್ತಿತ್ತು. ಕೆಲ ತಿಂಗಳಿಂದ ಮಂಜು ಹಾಗೂ ಮತ್ತೊಬ್ಬ ಕಾರ್ಮಿಕ ಗೋದಾಮಿನಲ್ಲಿ ಕೆಲ ಮಾಡುತ್ತಿದ್ದರು. ಇಬ್ಬರು ಕೂಲಿ ಕಾರ್ಮಿಕರಾಗಿದ್ದು ಶೆಡ್ ನಲ್ಲಿಯೇ ಮಲಗುತ್ತಿದ್ದರು. 
ಸೋಮವಾರ ರಾತ್ರಿ 11.30ರ ಸುಮಾರಿಗೆ ಗೋದಾಮಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿದೆ ನೆರೆ ನಿವಾರಿ ಮಂಜುನಾಥ್ ಎಂಬುವರ ಮನೆಗೆ ವ್ಯಾಪಾಸಿದ್ದು, ಮನೆಯವರೆಲ್ಲ ಹೊರಗೆ ಓಡಿ ಬಂದು ಕೂಡಲೇ ಪೊಲೀಸರಿಗೆ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 
ಕೂಡಲೇ ಎರಡು ವಾಹನಗಳಲ್ಲಿ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಳಿಗನ ಜಾವ 1.30ರ ಸುಮಾರಿಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದರು. ಗೋದಾಮಿನಲ್ಲಿ ಯಾವುದೇ ವಿದ್ಯುತ್ ಸಂಪರ್ಕ ಇಲ್ಲ. ಅಲ್ಲದೆ, ಅಗ್ನಿಶಾಮಕ ಸಿಬ್ಬಂದಿ ನೀರು ಹಾಯಿಸುವಾದ ಘಟನೆ ನಡೆದ ಸುವರ್ಣ ಲೇಔಟ್'ನಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿತ್ತು. ಬೆಂಕಿ ನಂದಿಸಿ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿದ್ದರು. 
ನಿನ್ನೆ ಬೆಳಿಗ್ಗೆ ಸಣ್ಣದಾಗಿ ಬೆಂಕಿ ಉರಿಯುತ್ತಿದ್ದರಿಂದ ಗೋದಾಮಿನ ಪಕ್ಕದ ಮನೆಯ ನಿವಾಸಿ ಮಂಜುನಾಥ್ ಅವರು ತಮ್ಮ ಮನೆಯ ಪೈಪ್ ಬಳಸಿ ನೀರು ಹಾಯಿಸಲು ಮುಂದಾಗಿದ್ದರು. ಈ ವೇಳೆ ಸುಟ್ಟು ಕರಕಲಾಗಿರುವ ಮೃತದೇಹ ಕಂಡುಬಂದಿದೆ. ಬಳಿಕ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 
ಕೂಡಲೇ ಚಂದ್ರಾ ಲೇಔಟ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಸಜೀವ ದಹನವಾದ ಎರಡು ಮೃತದೇಹಗಳು ಪತ್ತೆಯಾಗಿವೆ, ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com