2 ದಿನ ಉಪವಾಸ ಮಾಡಿ ಶೌಚಾಲಯ ಕಟ್ಟಿಸಿಕೊಂಡ ಬಳ್ಳಾರಿ ಬಾಲಕಿ!

ಶೌಚಾಲಯದ ಅನಿವಾರ್ಯತೆ ಮನಗಂಡ ಬಳ್ಳಾರಿಯ 7ನೇ ತರಗತಿ ವಿದ್ಯಾರ್ಥಿನಿ ಮಹಾಂಕಾಳಿ ಪಟ್ಟು ಹಿಡಿದು ಎರಡು ದಿನಗಳ ಕಾಲ ಉಪವಾಸ ಮಾಡಿ ಕೊನೆಗೂ ಮನೆಯಲ್ಲಿ...
ಬಾಲಕಿ ಮಹಾಂಕಾಳಿ
ಬಾಲಕಿ ಮಹಾಂಕಾಳಿ
Updated on: 
ಬಳ್ಳಾರಿ: ಶೌಚಾಲಯದ ಅನಿವಾರ್ಯತೆ ಮನಗಂಡ ಬಳ್ಳಾರಿಯ 7ನೇ ತರಗತಿ ವಿದ್ಯಾರ್ಥಿನಿ ಮಹಾಂಕಾಳಿ ಪಟ್ಟು ಹಿಡಿದು ಎರಡು ದಿನಗಳ ಕಾಲ ಉಪವಾಸ ಮಾಡಿ ಕೊನೆಗೂ ಮನೆಯಲ್ಲಿ ಶೌಚಾಲಯವನ್ನು ಕಟ್ಟಿಸಿಕೊಂಡಿದ್ದಾಳೆ. 
ಬಳ್ಳಾರಿಯ ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೆಚ್ ಮಹಾಂಕಾಳಿ ಕಿತ್ತು ತಿನ್ನುವ ಬಡತನ ಮಧ್ಯೆಯೂ ಪಟ್ಟು ಹಿಡಿದು ತಾನೇ ಮುಂದೆ ನಿಂತು ಮನೆಗೆ ಶೌಚಾಲಯ ಕಟ್ಟಿಸಿಕೊಂಡು ಉಳಿದವರಿಗೂ ಆದರ್ಶವಾಗಿದ್ದಾಳೆ. 
ಮಹಾಂಕಾಳಿ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಶೆಡ್ ಹಾಕಿದ ಪುಟ್ಟದಾದ ಮನೆಯಲ್ಲಿರುವ ವಿದ್ಯಾರ್ಥಿನಿ ಮಹಾಂಕಾಳಿ ಒಂದು ಒತ್ತು ಊಟ ಇಲ್ಲದೇ ಹೋದರೂ ಚಿಂತೆಯಿಲ್ಲ. ಮನೆ ಮುಂದೆ ಶೌಚಾಲಯವಿರಬೇಕು ಎಂದು ಪಟ್ಟು ಹಿಡಿದು ತನ್ನ ಇಚ್ಛೆಯನ್ನು ಪೂರೈಸಿಕೊಂಡಿದ್ದಾಳೆ. 
ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬಹುದು, ಅದಕ್ಕೆ ಗ್ರಾಮ ಪಂಚಾಯ್ತಿ ಸಹಕಾರಿಯಾಗಿರುತ್ತದೆ ಎಂಬ ವಿಷಯದ ಕುರಿತು ಶಾಲೆಯಲ್ಲಿ ಶೌಚಾಲಯ ಕುರಿತು ಜಾಗೃತಿ ಮೂಡಿಸಿದ್ದರು. ಇದರಿಂದ ತನ್ನ ಮನೆಯಲ್ಲೂ ಶೌಚಾಲಯ ಇರಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಆದರೆ ಇದಕ್ಕೆ ಪೋಷಕರು ನಿರಾಸಕ್ತಿ ತೋರಿದ್ದರಿಂದ ಎರಡು ದಿನಗಳ ಕಾಲ ಉಪವಾಸವಿದ್ದು ಶೌಚಾಲಯ ನಿರ್ಮಿಸಿಕೊಳ್ಳಲು ಮನೆಯವರಿಂದ ಒಪ್ಪಿಗೆ ಪಡೆದು ಯಶಸ್ವಿಯಾಗಿದ್ದಳು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com