ಹಕ್ಕಿ ಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ

ಬೆಂಗಳೂರು ನಗರದಲ್ಲಿ ಹಕ್ಕಿ ಜ್ವರ ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ ಸುಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ...
ಹಕ್ಕಿ ಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಹಕ್ಕಿ ಜ್ವರ ಭೀತಿ: ಮೈಸೂರು ಮೃಗಾಲಯದಲ್ಲಿ ಕಟ್ಟೆಚ್ಚರ
ಮೈಸೂರು: ಬೆಂಗಳೂರು ನಗರದಲ್ಲಿ ಹಕ್ಕಿ ಜ್ವರ ಸೋಂಕು ಕಂಡು ಬಂದಿರುವ ಹಿನ್ನಲೆಯಲ್ಲಿ ಸುಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಅಧಿಕಾರಿಗಳು ಹಕ್ಕಿ ಜ್ವರ ತಡೆಗೆ ಮುನ್ನೆಚ್ಚರಿಕೆಯಾಗಿ ತಕ್ಷಣ ಜೈವಿಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 
ಸೋಂಕು ನಿವಾರಕ ಉದ್ದೇಸಕ್ಕಾಗಿ ಪ್ರತ್ಯೇಕವಾಗಿ ಐದು ಸದಸ್ಯರನ್ನು ಒಳಗೊಂಡಿರುವ ತಂಡವನ್ನು ರಚಿಸಿ, ಅವರಿಗೆ ವೈಯಕ್ತಿಕ ಸುರಕ್ಷಾ ಸಲಕರಣೆಗಳನ್ನು (ಪಿಪಿಇ ಕಿಟ್) ಒದಲಿಸಲಾಗಿದೆ. ಪ್ರಾಣಿ ಪಾಲಕರಿಗೆ ಒಂದು ಪ್ರಾಣಿ ಮನೆಯಿಂದ ಮತ್ತೊಂದು ಮನೆಗಳಿಗೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಮೃಗಾಲಯದಲ್ಲಿರುವ ಪ್ರಾಣಿಗಳ ವರ್ತನೆಗಳನ್ನು ಆಗಾಗ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಪ್ರತೀ ಬಾರಿ ಪರೀಕ್ಷೆ ನಡೆಸಿದಾಗಲೂ ಅವರ ವರ್ತನೆಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. 
ಹಕ್ಕಿ ಜ್ವರದಿಂದ ಮೃಗಾಲಯದಲ್ಲಿ ಈ ವರೆಗೂ ಯಾವುದೇ ಸಾವುಗಳು ಸಂಭವಿಸಿಲ್ಲ. ಮೃಗಾಲಯದ ಸಿಬ್ಬಂದಿಗಳು ಸಸ್ತನಿಗಳು ಹಾಗೂ ಮಾಂಸಹಾರಿ ಪ್ರಾಣಿಗಳನ್ನು ಬೆಚ್ಚಗಿಡುವ ಕಾರ್ಯಗಳನ್ನು ಕೈಗೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com