ಮೂರು ವರ್ಷ ಕಾಲ ನೆರಮನೆಯರ ಹಸುವಿನಿಂದ ಹಾಲು ಕದ್ದವನಿಗೆ ರೂ.30 ಸಾವಿರ ದಂಡ!

ಮನೆಗಳ್ಳತನ, ಸರಗಳ್ಳತನ ಮಾಡುವ ಖದೀಮರ ಬಗ್ಗೆ ಕೇಳಿರುತ್ತೀರಿ. ಆದರೆ, ಹಸುವಿನ ಕೆಚ್ಚಲಿನಿಂದಲೇ ಹಾಲಿಗೆ ಕನ್ನ ಹಾಕುತ್ತಿದ್ದ ಕಳ್ಳ ಬಗ್ಗೆ ಕೇಳಿದ್ದೀರಾ? ಇಂತಹದ್ದೊಂದು ಕಳ್ಳತನ ತುಮಕೂರು ಸಮೀಪದ ಕೆಸ್ತೂರಿನಲ್ಲಿ ನಡೆದಿದೆ...
ಹಸುವಿನೊಂದಿಗೆ ಮಂಜುಳಮ್ಮ ಹಾಗೂ ಅವರ ಅತ್ತೆ ಸಿದ್ದಮ್ಮ
ಹಸುವಿನೊಂದಿಗೆ ಮಂಜುಳಮ್ಮ ಹಾಗೂ ಅವರ ಅತ್ತೆ ಸಿದ್ದಮ್ಮ
ತುಮಕೂರು; ಮನೆಗಳ್ಳತನ, ಸರಗಳ್ಳತನ ಮಾಡುವ ಖದೀಮರ ಬಗ್ಗೆ ಕೇಳಿರುತ್ತೀರಿ. ಆದರೆ, ಹಸುವಿನ ಕೆಚ್ಚಲಿನಿಂದಲೇ ಹಾಲಿಗೆ ಕನ್ನ ಹಾಕುತ್ತಿದ್ದ ಕಳ್ಳ ಬಗ್ಗೆ ಕೇಳಿದ್ದೀರಾ? ಇಂತಹದ್ದೊಂದು ಕಳ್ಳತನ ತುಮಕೂರು ಸಮೀಪದ ಕೆಸ್ತೂರಿನಲ್ಲಿ ನಡೆದಿದೆ. 
ಗ್ರಾಮದ ಮಂಜುಳಾ ಎಂಬುವವರು ಹಸುವೊಂದನ್ನು ಸಾಕಿದ್ದಾರೆ. ಆ ಹಸುವಿಗೆ ಹೊಟ್ಟೆ ತುಂಬ ಆಹಾರವನ್ನು ನೀಡುತ್ತಿದ್ದಾರೆ. ಆದರೂ ಹಸು ಹಾಲೇ ಕೊಡುತ್ತಿರಲಿಲ್ಲ. ಬೆಳಗಿನ ಜಾವ ಎದ್ದು ಮಾಲೀಕರು ಹಾಲು ಕರೆಯಲು ಹೋದರೆ ಹಸುವಿನ ಕೆಚ್ಚಿಲಿನಲ್ಲಿ ಹಾಲು ಖಾಲಿಯಾಗಿರುತ್ತಿತ್ತು. ಆದರೆ, ಸಂಜೆ ಮಾತ್ರ ಹಸು ಹಾಲು ಕೊಡುತ್ತಿತ್ತು. 
ವೈದ್ಯರಿಂದ ಚಿಕಿತ್ಸೆ ಕೊಡಿಸಿದ ಬಳಿ ಕೂಡ ಹಸು ಬೆಳಗಿನ ಜಾವ ಹಾಲು ಕೊಡುತ್ತಿರಲಿಲ್ಲ. ಹಸುವಿನಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯರು ತಿಳಿಸಿದಾಗ ತನ್ನ ಪತಿ ಮದ್ಯಚಟಕ್ಕಾಗಿ ಹಸುವಿನ ಹಾಲನ್ನು ಕಳ್ಳತನ ಮಾಡುತ್ತಿರಬಹುದು ಎಂದು ಮಂಜಮ್ಮ ಅವರು ತಮ್ಮ ಪತಿ ನರಸಿಂಹರಾಜು ಎಂಬುವವರ ಮೇಲೆ ಅನುಮಾನ ಪಟ್ಟಿದ್ದಾರೆ. ಈ ವೇಳೆ ತಮ್ಮ ಮೇಲೆ ಪತ್ನಿ ಮಾಡುತ್ತಿರುವ ಆಪಾದನೆಯಿಂದ ರೋಸಿ ಹೋಗಿ ಆಪಾದನೆಯಿಂದ ಪಾರಾಗಲು ನರಸಿಂಹರಾಜು ಅವರು, ಕೆಚ್ಚನಲ್ಲಿರುವ ಹಾಲು ಏನಾಗುತ್ತಿದೆ ಎಂಬುದನ್ನು ಪರೀಕ್ಷಿಸಲು ಕಾವಲು ಕುಳಿತುಕೊಂಡಿದ್ದಾರೆ. ಈ ವೇಳೆ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ.  
ಹಸು ಬೆಳಗಿನ ಜಾವ ಹಾಲು ಕೊಡದಿದ್ದಕ್ಕೆ ಕಾರಣ ಪಕ್ಕದ ಮನೆಯ ರಾಜಣ್ಣ ಎಂಬಾತ ಎಂಬುದು ತಿಳಿದುಬಂದಿದೆ. ಮಧ್ಯರಾತ್ರಿ ವೇಳೆ ಸೈಲೆಂಟಾಗಿ ಬರುತ್ತಿದ್ದ ರಾಜಣ್ಣ ಹಸುವಿನ ಕೆಚ್ಚಲಿನಲ್ಲಿ ಇದ್ದ ಹಾಲನ್ನು ಕರೆದುಕೊಂಡು ಪರಾರಿಯಾಗುತ್ತಿದ್ದ. ವರ್ಷಗಳಿಂದ ಈತ ಈ ಇದೇ ರೀತಿ ಮಾಡುತ್ತಿದ್ದ. ಪ್ರತೀನಿತ್ಯ ಬೆಳಿಗಿನ ಜಾವ 5 ಲೀಟರ್ ಹಾಲನ್ನು ಕದ್ದು ಮಾರುತ್ತಿದ್ದ. ಇದೀಗ ಆರೋಪಿಯನ್ನು ಕೋರಾಠಾಣೆ ಪೊಲೀಸು ಬಂಧನಕ್ಕೊಳಪಡಿಸಿದ್ದಾರೆ. 
ಹಸುವಿನ ಕೊಟ್ಟಿಗೆಯಲ್ಲಿ ಶಬ್ಧ ಕೇಳಿಸುತ್ತಿತ್ತು. ಈ ವೇಳೆ ಹಾಲು ಕರಿಯುತ್ತಿದ್ದ ವ್ಯಕ್ತಿಯನ್ನು ಮುಟ್ಟಿ ನೋಡಿದಾಗ ಅದು ನೆರೆಮನೆಯ ರಾಜಣ್ಣ ಎಂಬುದು ತಿಳಿಯಿತು. ಗುರ್ತಿಕೆ ತಿಳಿಯುತ್ತಿದ್ದಂತೆಯೇ ಸ್ಥಳದಿಂದ ರಾಜಣ್ಣ ಪರಾರಿಯಾದ ಎಂದು ನರಸಿಂಹರಾಜು ಹೇಳಿದ್ದಾರೆ. 
ಈ ವಿಚಾರ ಇಡೀ ಗ್ರಾಮಕ್ಕೆ ತಿಳಿದು, ಗ್ರಾಮದ ಮುಖ್ಯಸ್ಥರಿಗು ಮಾಹಿತಿ ತಿಳಿದಿದೆ. ಬಳಿಕ ಊರಿನ ಮುಖ್ಯಸ್ಥರು ನರಸಿಂಹರಾಜು ಅವರಿಗೆ ರೂ.30,000 ದಂಡದ ಹಣವನ್ನು ನೀಡುವಂತೆ ಶಿಕ್ಷೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com