ಪ್ರಧಾನಿ ಮೋದಿಗೆ ದೇಶದ ಅಭಿವೃದ್ಧಿ ಮಾಡಲು 5 ವರ್ಷ ಸಾಲುವುದಿಲ್ಲ, ಮತ್ತಷ್ಟು ಸಮಯಬೇಕು: ಯದುವೀರ್

ದೇಶವನ್ನು ಅಭಿವೃದ್ಧಿ ಪತದಲ್ಲಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐದು ವರ್ಷಗಳ ಅವಧಿ ಸಾಲುವುದಿಲ್ಲ, ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು ಎಂದು...
ನರೇಂದ್ರ ಮೋದಿ-ಯದುವೀರ್
ನರೇಂದ್ರ ಮೋದಿ-ಯದುವೀರ್
Updated on: 
ಮೈಸೂರು: ದೇಶವನ್ನು ಅಭಿವೃದ್ಧಿ ಪತದಲ್ಲಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐದು ವರ್ಷಗಳ ಅವಧಿ ಸಾಲುವುದಿಲ್ಲ, ಅವರಿಗೆ ಮತ್ತಷ್ಟು ಅವಕಾಶಗಳು ಸಿಗಬೇಕು ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. 
ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣಬೇಕಾದರೆ ಅವರಿಗೆ ಇನ್ನಷ್ಟು ಸಮಯಬೇಕಿದೆ. ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸಕ್ಕೆ ನಾವೆಲ್ಲ ಬೆಂಬಲಿಸಬೇಕಿದೆ ಎಂದರು. 
ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದು ಕಳೆದ ನಾಲ್ಕು ವರ್ಷಗಳ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕುರಿತಾಗಿ ದೇಶದ ಗಣ್ಯರಿಗೆ ತಿಳಿಸಲು ಮುಂದಾಗಿದ್ದು ಇದಕ್ಕಾಗಿ ಗಣ್ಯರಿಗೆ ಸರ್ಕಾರದ ಸಾಧನೆಯ ಪುಸ್ತಕಗಳನ್ನು ನೀಡುತ್ತಿದೆ. 
ಸದ್ಯ ಬಿಜೆಪಿ ಮುಖಂಡ ರಾಮ್ ದಾಸ್ ಮತ್ತು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಒಡೆಯರ್ ಅವರನ್ನು ಭೇಟಿ ಮಾಡಿದರು. ಕಳೆದ ಕೆಲ ದಿನಗಳ ಹಿಂದೆ ಶಾಸಕ ಶ್ರೀರಾಮುಲು ಅವರು ನಟ ಯಶ್ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com