

ಬೆಂಗಳೂರು: ಕಳೆದ ಜುಲೈ 5ರಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಂಡಿಸಿದ್ದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ದರ ಏರಿಕೆ ಮಾಡಿದ್ದು, ಅದು ಇಂದಿನಿಂದ ಜಾರಿಗೆ ಬರಲಿದೆ. ಇದರಿಂದ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಕೂಡ ಏರಿಕೆಯಾಗಲಿದ್ದು ಸಾಮಾನ್ಯ ಜನಜೀವನ ದುಸ್ತರವಾಗಲಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 2ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದು ಕಳೆದ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆ ಲೀಟರ್ ಗೆ 79 ರೂಪಾಯಿ 41 ಪೈಸೆ ಮತ್ತು ಡೀಸೆಲ್ ಬೆಲೆ 70 ರೂಪಾಯಿ 78 ಪೈಸೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಪೆಟ್ರೋಲ್ ದರ 78 ರೂಪಾಯಿ 5 ಪೈಸೆ ಹಾಗೂ ಡೀಸೆಲ್ ಬೆಲೆ 69 ರೂಪಾಯಿ 46 ಪೈಸೆಯಷ್ಟಾಗಿದೆ. ರಾಜ್ಯ ಸರ್ಕಾರ ಕಳೆದ ಬಜೆಟ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 1 ರೂಪಾಯಿ 14 ಪೈಸೆ ಮತ್ತು 1 ರೂಪಾಯಿ 12 ಪೈಸೆಯಷ್ಟು ಹೆಚ್ಚಳ ಮಾಡಿತ್ತು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಹಜವಾಗಿ ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಲಿದೆ. ಸರ್ಕಾರ ಖಾಸಗಿ ವಾಹನಗಳ ಸೇವಾ ದರವನ್ನು ಶೇಕಡಾ 21ರಷ್ಟು ಹೆಚ್ಚಳ ಮಾಡಿರುವುದರಿಂದ ವಸ್ತುಗಳ ಸಾಗಾಟ ದರ ಹೆಚ್ಚಳವಾಗುತ್ತದೆ. ಇದರಿಂದ ಹಾಲು, ತರಕಾರಿ, ಸರಕು ಸಾಗಣೆ ವೆಚ್ಚಳ ಹೆಚ್ಚಳವಾಗುತ್ತದೆ. ಬಸ್ಸು, ಟ್ಯಾಕ್ಸಿ ದರ ಹೆಚ್ಚಳವಾಗಲಿದೆ.
ಆದರೆ ಖಾಸಗಿ ವಾಹನಗಳ ದರ ಹೆಚ್ಚಳ ಮುಂದಿನ ಆಗಸ್ಟ್ ತಿಂಗಳಿನಿಂದ ಜಾರಿಗೆ ಬರಲಿದೆ.
ರಾಜ್ಯ ಸರ್ಕಾರ ವಿದ್ಯುತ್ ತೆರಿಗೆ ದರ ಶೇಕಡಾ 3ರಷ್ಟು ಹೆಚ್ಚಳ ಮಾಡಿ ಮತ್ತು ಅಬಕಾರಿ ಸುಂಕ ಶೇಕಡಾ 4ರಷ್ಟು ಹೆಚ್ಚಿಸಿರುವುದರಿಂದ ಮದ್ಯದ ಮೇಲಿನ ದರ ಕೂಡ ಹೆಚ್ಚಳವಾಗಲಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹೀಗಿದೆ: ಪೆಟ್ರೋಲ್ ದರ 79 ರೂಪಾಯಿ 41 ಪೈಸೆ
ಡೀಸೆಲ್ ದರ – 70 ರೂಪಾಯಿ 78 ಪೈಸೆ.
ಎಕ್ಸ್ ಟ್ರಾ ಪ್ರೀಮಿಯಂ ಪೆಟ್ರೋಲ್ – 82.16 ರೂಪಾಯಿ
ಪ್ರೀಪಿಯಂ ಪೆಟ್ರೋಲ್- 1.40 ರೂಪಾಯಿ ಹೆಚ್ಚಳ
ವಿದ್ಯುತ್ ತೆರಿಗೆ ದರ ಪ್ರತಿ ಯೂನಿಟ್‍ಗೆ ಶೇ.3 ರಷ್ಟು ಹೆಚ್ಚಳ
ಹಾಲು, ತರಕಾರಿ, ಬಸ್ ಟಿಕೆಟ್ ದರ ಪೆಟ್ರೋಲ್, ಡಿಸೇಲ್ ತೆರಿಗೆ ಹೆಚ್ಚಾಗಿರುವುದರಿಂದ ಸರಕು ಸಾಗಾಣೆ ವೆಚ್ಚ ಹೆಚ್ಚಾಗಲಿದೆ. ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ