ಮೈಸೂರು: ಲೇಡೀಸ್ ಹಾಸ್ಟೆಲ್ ನಲ್ಲಿ ವಿಕೃತ ಕಾಮಿಯಿಂದ ಒಳ ಉಡುಪು ಕಳವು

ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಗೆ ನುಗ್ಗಿ ಅವರ ಒಳ ಉಡುಪುಗಳನ್ನು ಕದ್ದೊಯ್ಯುವ ವಿಕೃತ ಕಾಮಿಯೊಬ್ಬನ ಉಪಟಳ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.
ವಿಕೃತ ಕಾಮಿ
ವಿಕೃತ ಕಾಮಿ
Updated on
ಮೈಸೂರು: ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ ಗೆ ನುಗ್ಗಿ ಅವರ ಒಳ ಉಡುಪುಗಳನ್ನು ಕದ್ದೊಯ್ಯುವ ವಿಕೃತ ಕಾಮಿಯೊಬ್ಬನ ಉಪಟಳ ಮೈಸೂರಿನಲ್ಲಿ ಕಾಣಿಸಿಕೊಂಡಿದೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಮೂರನೇ ಹಂತಸ್ತಿನ ನರ್ಸಿಂಗ್ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗುವ ಈ ವ್ಯಕ್ತಿ  ಯುವತಿಯರು ಒಣ ಹಾಕಿರುವ ಬಟ್ಟೆಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಉಡುಪುಗಳನ್ನು ಕಳವು ಮಾಡುತ್ತಿರುಉವುದನ್ನು ಕಂಡ ಯುವತಿಯೊಬ್ಬಳು ಕಿರುಚಿಕೊಂಡಿದ್ದಾಳೆ. ಇದನ್ನು ಕೇಳಿದ ಉಳಿದ ಯುವತಿಯರೂ ಹೊರಬಂದಿದ್ದಾರೆ. ಆದರೆ ಅಷ್ಟರಲ್ಲಿ ವಿಕೃತ ಕಾಮಿ ಕೃತ್ಯ ನೋಡಿದ ವಿದ್ಯಾರ್ಥಿಯ ಕತ್ತು ಹಿಸುಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲದೆ ವಿದ್ಯಾರ್ಥಿನಿಯ ಕೋಣೆಗೆ ನುಗ್ಗಿದ ಆತ ಅವಳ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಖಾಕಿ ಬಟ್ಟೆ ಧರಿಸಿದ್ದ ಈತ ಸೆಕ್ಯುರಿಟಿ ಗಾರ್ಡ್‍ನ ಟೋಪಿಯನ್ನು ಸಹ ತೊಟ್ಟಿದ್ದ. ಸೆಕ್ಯೂರಿಟಿ ಗಾರ್ಡ್, ಸಿಸಿಟಿವಿ ಇದ್ದರೂ ಸಹ ಕಾಂಪೌಂಡ್ ಹಾರಿ ಒಳ ನುಗ್ಗಿದ್ದ ಈ ತನ ಉಪಟಳದಿಂದ ವಿದ್ಯಾರ್ಥಿನಿಯರು ಆತಂಕಗೊಂಡಿದ್ದಾರೆ.
ವಿದ್ಯಾರ್ಥಿನಿಯರು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದು ಆಡಳಿತ ಮಂಡಳಿಯು ದೇವರಾಜ ಪೊಲೀಸ್​ ಠಾಣೆಯಲ್ಲಿ ಪಕರಣ ದಾಖಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com