ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: ಕಾನ್ಸ್ ಟೇಬಲ್ ಮೇಲೆ ಹಲ್ಲೆ, ಏಳು ಆರೋಪಿಗಳ ಬಂಧನ
ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ನಿಂದ ಹೊರಗೆ ದಬ್ಬಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಯಲಹಂಕ ನ್ಯೂ ಟೌನ್ ಪೊಲೀಸರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ರೆಸ್ಟೋರೆಂಟ್ ಸದಸ್ಯರನ್ನು ಬಂಧಿಸಿದ್ದಾರೆ.
ಬೆಂಗಳೂರು: ಮಧ್ಯರಾತ್ರಿಯಲ್ಲಿ ರೆಸ್ಟೋರೆಂಟ್ ನಿಂದ ಹೊರಗೆ ದಬ್ಬಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಯಲಹಂಕ ನ್ಯೂ ಟೌನ್ ಪೊಲೀಸರು ಭದ್ರತಾ ಸಿಬ್ಬಂದಿ ಸೇರಿದಂತೆ ಏಳು ಮಂದಿ ರೆಸ್ಟೋರೆಂಟ್ ಸದಸ್ಯರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಜಿಲ್ ಅಹ್ಮದ್, ಫೈಜಲ್ ಎಂ ಮಾಜಿದ್ ಖಾನ್, ಜುನೈದ್, ಶಾಂಸೀರ್, ಪಯಾಜ್ ಮತ್ತು ಫೈಜಲ್ ನವಾಜ್ ಎಂದು ಗುರುತಿಸಲಾಗಿದೆ.
ಕಾನ್ಸ್ ಟೇಬಲ್ ಸದಾಶಿವ ರಾತ್ರಿ ಪಾಳಿ ಮಪ್ತಿಯಲ್ಲಿರಬೇಕಾದರೆ ಆರು ಮಂದಿ ರೆಸ್ಟೋರೆಂಟ್ ಒಳಗಡೆ ಸದ್ದು ಮಾಡುತ್ತಿದ್ದನ್ನು ಗಮನಿಸಿದ್ದಾರೆ. ನಂತರ ಅಲ್ಲಿಗೆ ತೆರಳಿ ರೆಸ್ಟೋರೆಂಟ್ ಮುಚ್ಚುವಂತೆ ಸದಸ್ಯರಿಗೆ ಹೇಳಿದ್ದಾರೆ. ಆದರೆ,ರೆಸ್ಟೋರೆಂಟ್ ಮುಚ್ಚಲು ತಿರಸ್ಕರಿಸಿದ ಸದಸ್ಯರು ಸದಾಶಿವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ಮಧ್ಯೆ ಸದಾಶಿವ ರೆಸ್ಟೋರೆಂಟ್ ಮುಚ್ಚಲು ಮುಂದಾದಾಗ ಆಕ್ರೋಶಗೊಂಡ ಸದಸ್ಯರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಶಾಂಸೀರ್ ಆವರಣದಿಂದ ಸದಾಶಿವ ಅವರನ್ನು ಹೊರಗೆ ದಬ್ಬಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ