ಚಿಕ್ಕಮಗಳೂರು: ಪೋಲೀಸ್ ವಸತಿ ಗೃಹದಲ್ಲೇ ನೇಣು ಬಿಗಿದುಕೊಂಡು ಪೋಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಎರಡು ವಾರಗಳ ಹಿಂದಷ್ಟೇ ವಿವಾಹವಾಗಿದ್ದ ಪೋಲೀಸ್ ಪೇದೆ ಅನಿಲ್(30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ಆತ್ಮಹತ್ಯೆಗೆ ಮುನ್ನ ಡೆತ್ ನೊಟ್ ಬರೆದಿಟ್ಟಿದ್ದಾರೆ.
ಚಿಕ್ಕಮಗಳೂರು ಸಂಚಾರಿ ಪೋಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇವರು ರಾಮನ ಹಳ್ಳಿಯಲ್ಲಿರುವ ಪೋಲೀಸ್ ವಸತಿ ಗೃಹದಲ್ಲಿ ಸಾವಿಗೆ ಶರಣಾಗಿದಾರೆ. ಕೌತುಂಬಿಕ ಸಮಸ್ಯೆಯಿಂದಾಗಿ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.