ತಡರಾತ್ರಿ 1.45 ಸುಮಾರಿಗೆ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡವೊಂದು ಶೆಟ್ ಮೇಲೆ ಕುಸಿದು ಬಿದ್ದಿದೆ. ಶೆಟ್ ನಲ್ಲಿ 5 ಮಂದಿ ವಾಸವಿದ್ದರು. ಗೋಡೆ ಕುಸಿದು ಬಿದ್ದ ಪರಿಣಾಮ ಮಹಾಂತೇಶ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಾಂತೇಶ್ ಪತ್ನಿ ಪಾರ್ವತಿ (22), ಶರಣಪ್ಪ (34), ಶೋಭಾ (27) ಅವಶೇಷಗಳಿ ಸಿಲುಕಿದ್ದರು. ಬಳಿಕ ಅಗ್ನಿ ಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಗಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.