ಬೆಂಗಳೂರು: ಮಹಿಳಾ ಕಾನ್ಸ್ ಟೇಬಲ್ ಮೇಲೆ ಅತ್ಯಾಚಾರ

ವಿವಾಹವಾಗುವುದಾಗಿ ಹೇಳಿ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಒಬ್ಬರು ದೂರು ದಾಖಲಿಸಿದ್ದಾರೆ. ಘಟನೆ ನಡೆದು ಎರಡು ವರ್ಷದ ನಂತರ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ವಿವಾಹವಾಗುವುದಾಗಿ ಹೇಳಿ  ವ್ಯಕ್ತಿಯೊಬ್ಬ ತನ್ನ ಮೇಲೆ  ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ ನಗರದ ಟ್ರಾಫಿಕ್  ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಒಬ್ಬರು    ದೂರು  ದಾಖಲಿಸಿದ್ದಾರೆ. ಘಟನೆ ನಡೆದು ಎರಡು ವರ್ಷದ ನಂತರ  ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಿನ್  ಸಾಬ್   ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಆತನ ಕುಟುಂಬ ಸದಸ್ಯರು ಅಪಮಾನ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
2015ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ  ವಿಜಯಪುರಕ್ಕೆ ಹೋಗಿದ್ದಾಗ  ತನ್ನಗೂ ಅಮಿನ್ ಗೂ ಪರಿಚಯವಾಗುತ್ತದೆ. ಅಲ್ಲಿಯೇ ವ್ಯಾಸಂಗ ಮಾಡುತ್ತಿದ್ದ ಅಮಿನ್  ಹತ್ತಿರವಾಗಿ, ಪ್ರೇಮಂಕುರವಾಗುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
2016ರಲ್ಲಿ ಅಮಿನ್  ಸಾಬ್  ಮದುವೆಯಾಗುವುದಾಗಿ ನಂಬಿಕೆ ಹುಟ್ಟಿಸಿದ್ದಲ್ಲದೇ,  ಬಲವಂತವಾಗಿ ದೈಹಿಕ ಸಂಪರ್ಕ ಕೂಡಾ  ನಡೆಸಿದ್ದಾನೆ. ಅದಕ್ಕೆ ಆಕೆ ಒಪ್ಪದಿದ್ದಾಗ ಹಲ್ಲೆ ಕೂಡಾ ಮಾಡಿದ್ದಾನೆ.  ಕೆಲ ತಿಂಗಳ ನಂತರ  ಬೆಂಗಳೂರಿಗೆ ಬಂದಿದ್ದ ಆತ ಮೆಜಿಸ್ಟಿಕ್ ನ ಲಾಡ್ಜ್ ವೊಂದರಲ್ಲಿ ಉಳಿದುಕೊಂಡು ಬರಬೇಕೆಂದು ಹೇಳಿದ್ದಾನೆ.  ಆಗ ಅಲ್ಲಿಗೆ ಹೋದಾಗ ಮದುವೆಯಾಗುವುದು ಹೇಳಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ.
ಆದರೆ, ತದನಂತರ ಅವರಿಬ್ಬರ ಮದುವೆಗೆ ಕುಟುಂಬದವರು ಒಪ್ಪುತ್ತಿಲ್ಲ  ಎಂದು ಹೇಳಲು ತೊಡಗಿದ್ದಾನೆ. ಮತ್ತೆ ಆತನನ್ನು ಸಂಪರ್ಕಿಸಿದ್ದಾಗ  ಜಾತಿ ಪ್ರಸ್ತಾಪಿಸಿ ನಿಂದಿಸಿದ್ದಾನೆ ಎಂದು ಮಹಿಳಾ ಕಾನ್ಸ್ ಟೇಬಲ್  ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com