ಹುಬ್ಬಳಿಯ ಅನ್ನಾಪುರಕ್ಕೆ ತೆರಳುವ ಬಸ್ ನಲ್ಲಿ ಈ ಅವ್ಯವಸ್ಥೆ ಎದುರಾಗಿದೆ. ಮಳೆ ಬರುತ್ತಿದ್ದರಿಂದ ಬಸ್ ಚಾಲಕನಿಗೆ ಹಿಂಬದಿಯಿಂದ ಮಳೆ ನೀರು ಬೀಳುತ್ತಿದ್ದರಿಂದ ಬಸ್ ಓಡಿಸಲು ಕಷ್ಟವಾಗುತ್ತಿದ್ದು ಇದರಿಂದಾಗಿ ಕಂಡೆಕ್ಟರ್ ಚಾಲಕನಿಗೆ ಮಳೆ ನೀರು ಬೀಳದಂತೆ ಛತ್ರಿ ಹಿಡಿದಿದ್ದಾರೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.