ಲೈವ್ ಬ್ಯಾಂಡ್; ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ನಗರ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ನಡೆಸುತ್ತಿರುವ ಲೈವ್ ಬ್ಯಾಂಡ್ ಗಳನ್ನು ಮುಚ್ಚುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿರುವ ಕುರಿತಂತೆ ಬೆಂಗಲೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ನೋಟಿಸ್...
ಬೆಂಗಳೂರು; ನಗರ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೆ ನಡೆಸುತ್ತಿರುವ ಲೈವ್ ಬ್ಯಾಂಡ್ ಗಳನ್ನು ಮುಚ್ಚುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿರುವ ಕುರಿತಂತೆ ಬೆಂಗಲೂರು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಪರವಾನಗಿ ಹೊಂದಿರದ ಹಿನ್ನಲೆಯಲ್ಲಿ ವಹಿವಾಟು ನಿಲ್ಲಿಸುವಂತೆ ಸೂಚಿಸಿ ಲೈವ್ ಬ್ಯಾಂಡ್ ನಡೆಸುತ್ತಿರುವ ನರರದ ನರಸಿಂಹ ರಾಜ ರಸ್ತೆಯ ಮೆಸರ್ಸ್ ಲವರ್ಸ್ ನೈಟ್ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಕೆ.ಜಿ ರಸ್ತೆಯ ಕೋಸ್ಟರಿಕಾ ಬಾರ್ ಆ್ಯಂಡ್ ರೆಸ್ಟೋರೆಂಡ್ ಮತ್ತು ರೆಸಿಡೆನ್ಸಿ ರಸ್ತೆ ನರ್ತಕಿ ಬಾರ್ ಆ್ಯಂಡ್ ರೆಸ್ಟೋರೆಂಟ್'ಗೆ ನೋಟಿಸ್ ಜಾರಿಗೊಳಿಸಲಾಗಿತ್ತು.
ಈ ನೋಟಿಸ್ ಪ್ರಶ್ನಿಸಿ ಹೈಕೋರ್ಟ್'ಗೆ ಪ್ರತ್ಯೇಕ ಆರ್ಜಿ ಸಲ್ಲಿಸಲಾಗಿತ್ತು. ಪೊಲೀಸ್ ಆಯುಕ್ತರು, ಕಲಾಸಿಪಾಳಅಯ, ಎಜೆ.ಪಾರ್ಕ್, ಅಶೋಕ ನಗರ ಠಾಣೆಯ ಠಾಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ಬುಧವಾರಕ್ಕೆ ವಿಚಾರಣೆ ಮುಂದೂಡಿದೆ.