ಸರ್ಕಾರದ ಪರ ವಾದ ಮಂಡಿಸಿದ ತಾರಾನಾಥ ಪೂಜಾರಿ, ಸರ್ಕಾರ ಶಿಕ್ಷಕರ ವರ್ಗಾವಣೆ ನಿಯಮ ಸೆಕ್ಷನ್ 5ಕ್ಕೆ 2017ರ ಏ.18ರಂದೇ ತಿದ್ದುಪಡಿ ಮಾಡಿ, ಅಂತರ ವಲಯ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ. ಹಾಗಾಗಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ, ಹಿಂದೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯ ಅವರ ವಾದವನ್ನು ಪುರಸ್ಕರಿಸಿ ತಡೆಯಾಜ್ಞೆ ತೆರವುಗೊಳಿಸಿತಲ್ಲದೆ, ತಿದ್ದುಪಡಿಯನ್ನು ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶ ಕಲ್ಪಿಸಿತು.