ಬೆಂಗಳೂರು: ನೆರೆಮನೆಯ ಬಾತ್ ರೂಮ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ವ್ಯಕ್ತಿ ಬಂಧನ

ಪಕ್ಕದ ಮನೆಯ ಮಹಿಳೆಯ ಸ್ನಾನದ ದೃಶ್ಯ ಸೆರೆ ಹಿಡಿಯುವುದಕ್ಕಾಗಿ, ಅವರ ಮನೆಯ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಆರೋಪದಡಿ ಜೀವನ್‌ ಸೇಠ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬೆಂಗಳೂರು: ಪಕ್ಕದ ಮನೆಯ ಮಹಿಳೆಯ ಸ್ನಾನದ ದೃಶ್ಯ ಸೆರೆ ಹಿಡಿಯುವುದಕ್ಕಾಗಿ, ಅವರ ಮನೆಯ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟಿದ್ದ ಆರೋಪದಡಿ ಜೀವನ್‌ ಸೇಠ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಭೌಮನಗರದಲ್ಲಿ ಸೇಲ್ಸ್ ಮ್ಯಾನೇಜರ್ ಆಗಿರುವ ಜೀವನ್ ಮನೆಯ ಪಕ್ಕವೇ ಕುಟುಂಬವೊಂದು ವಾಸವಿದೆ. ಅವರ ಮನೆಯಲ್ಲೇ ಕ್ಯಾಮೆರಾ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದರು.
ಇತ್ತೀಚೆಗೆ ಸ್ನಾನ ಮಾಡುತ್ತಿದ್ದ ಮಹಿಳೆಗೆ ಕಿಟಕಿಯಲ್ಲಿದ್ದ ಕ್ಯಾಮೆರಾ ಕಂಡಿತ್ತು.  ನಂತರ ಆ ವಿಷಯವನ್ನು ತನ್ನ ಪತಿಗೆ ತಿಳಿಸಿ ಅದರ ಸಮೇತವಾಗಿ ದೂರು ನೀಡಿದ್ದರು. ಜೀವನ್‌ ಸೇರಿದಂತೆ ಅಕ್ಕ–ಪಕ್ಕದಲ್ಲಿ ವಾಸವಿರುವ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಅವಾಗಲೇ ಜೀವನ್‌  ತಪ್ಪೊಪ್ಪಿಕೊಂಡ’ ಎಂದರು.
ಮಹಿಳೆ ತರಕಾರಿ ತರಲು ಮನೆಯಿಂದ ಕೆಳಗೆ ಹೋಗಿದ್ದಾಗ ಕ್ಯಾಮೆರಾ ಫಿಕ್ಸ್ ಮಾಡಿದ್ದಾಗಿ ಆತ ಹೇಳಿದ್ದಾನೆ. ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇತ್ತೀಚೆಗಷ್ಟೆ ಕೋರಮಂಗಲದಿಂದ ಇಲ್ಲಿಗೆ ಶಿಫ್ಟ್ ಆಗಿದ್ದ, ಈ ಮೊದಲು ಆರೋಪಿ ಇಂತ ಕೆಲಸಗಳನ್ನು ಮಾಡಿದ್ದ, ಆದರೆ ಎಲ್ಲಿಯೂ ದೂರು ದಾಖಲಾಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com