

ಬೆಂಗಳೂರು: ಕಳೆದ ವರ್ಷ ವರ್ತೂರನ ಶೋಭಾ ಡ್ರಿಮ್ ಅಕ್ರೀಸ್ ಕಟ್ಟಡ ನಿರ್ಮಾಣದ ವೇಳೆ ಮೃತಪಟ್ಟಿದ್ದ ಮೂವರು ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ರಾಜ್ಯಸರ್ಕಾರ, ಬಿಬಿಎಂಪಿ, ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕ್ರೇಡಾಯ್ ಗೆ ಹೈಕೋರ್ಟ್ ಸೂಚನೆ ನೀಡಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ದಿನೇಶ್ ಮಹೇಶ್ವರಿ ಮತ್ತು ಎಸ್. ಸುನೀಲ್ ದತ್ತ್ ಯಾದವ್ ಅವರಿದ್ದ ದ್ವಿಸದಸ್ಯ ಪೀಠ, ಕಟ್ಟಡ ಕಾರ್ಮಿಕರ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ನೀಡಬೇಕು.ಈ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಕಟ್ಟಡ ಕಾರ್ಮಿಕರ ಕುಟುಂಬ ಸುರಕ್ಷಿತವಾಗಿ ಬದುಕಲು 25 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಅರ್ಜಿದಾರರ ಪರ ವಕೀಲರಾದ ಕ್ರಿಪ್ಟಾನ್ ರೊಜಾರಿಯಾ ಒತ್ತಾಯಿಸಿದ್ದರು.
ಮೃತಪಟ್ಟ ಕುಟುಂಬ ಸದಸ್ಯರಿಗೆ 25 ಲಕ್ಷ ಹಾಗೂ ಕಟ್ಟಡ ನಿರ್ಮಾಣದ ವೇಳೆ ಗಾಯಗೊಂಡ ಕುಟುಂಬ ವರ್ಗಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯಸರ್ಕಾರಕ್ಕೆ ನ್ಯಾಯಾಲಯ ಸೂಚಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು.