1,806 ಪರೀಕ್ಷಾ ಕೇಂದ್ರಗಳಿಗೆ ಬೇರೆ ಸರ್ಕಾರಿ ಶಾಲೆಗಳ ಮುಖ್ಯಸ್ಥರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿದೆ. ಎಂಟು ಪ್ರಥಮ ಭಾಷೆ, ಎರಡು ದ್ವಿತೀಯ ಭಾಷೆ, ಒಂಬತ್ತು ತೃತೀಯ ಭಾಷೆ, ಮೂರು ಸಾಮಾನ್ಯ ಐಚ್ಛಿಕ ವಿಷಯ, ನಾಲ್ಕು ವಿಶೇಷ ಐಚ್ಛಿಕ ವಿಷಯ, ಎರಡು ತಾಂತ್ರಿಕ ವಿಷಯ, ಐದು ಎನ್‌ಎಸ್‌ಕ್ಯೂಎಫ್ ವಿಷಯಗಳಲ್ಲಿ ಒಟ್ಟಾರೆ (ಏಳು ಮಾಧ್ಯಮಗಳಲ್ಲಿ) 33 ವಿಷಯಗಳಲ್ಲಿ ಪರೀಕ್ಷೆ ನಡೆಯಲಿವೆ.