

ಬೆಂಗಳೂರು: ಸಾಗರದ ಅಲೆಯನ್ನು ಬಳಸಿ ಇಂಧನವನ್ನು ತಯಾರಿಸುವ ಸಾಧನವನ್ನು ಬೆಂಗಳೂರು ಮೂಲದ ಮರ್ಚೆಂಟ್ ನೆವಿಯ ಮಾಜಿ ಕ್ಯಾಪ್ಟನ್ ಮತ್ತು ಸಂಶೋಧಕ ಕಂಡುಹಿಡಿದಿದ್ದಾರೆ. ಅದು ಅಗ್ಗದ ದರದಲ್ಲಿ ಅನ್ನುವುದು ವಿಶೇಷ.
ಸಾಗರದ ಅಲೆಗಳನ್ನು ವಿದ್ಯುತ್ ಆಗಿ ಪರಿವರ್ತಿಸುವ ಸಾಧನವನ್ನು ಕ್ಯಾಪ್ಟನ್ ಡಿ.ಸಿ.ಶೇಖರ್ ಕಂಡುಹಿಡಿದಿದ್ದಾರೆ. 2016ರ ಡಿಸೆಂಬರ್ ನಲ್ಲಿ ಸಾಧನವನ್ನು ನಿರ್ಮಿಸಲು ಆರಂಭಿಸಿದ ಕ್ಯಾಪ್ಟನ್ ಶೇಖರ್ ಅವರ ಸಂಶೋಧನೆಗೆ ಕಳೆದ ವರ್ಷ ಫೆಬ್ರವರಿಯಲ್ಲಿ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನೆ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಮರ್ಚೆಂಟ್ ನೆವಿಯ 26 ವರ್ಷಗಳ ಅನುಭವವನ್ನು ಧಾರೆಯೆರೆದಿರುವ ಕ್ಯಾಪ್ಟನ್ ಶೇಖರ್ ಮೂಲಮಾಧರಿಯನ್ನು ತಯಾರಿಸಿ ದೇವನಹಳ್ಳಿ ಸಮೀಪ ಸಾಡಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ಇದನ್ನು ಐಐಟಿ-ಮದ್ರಾಸ್ ನಲ್ಲಿ ಪ್ರಯೋಗ ಮಾಡಲಾಗಿದ್ದು, ಕೊಳವೊಂದರಲ್ಲಿ ಅಲೆಗಳನ್ನು ಸೃಷ್ಟಿಸಲಾಗಿದೆ, ಇದಕ್ಕೆ ಧನಾತ್ಮಕ ಫಲಿತಾಂಶ ಸಿಕ್ಕಿದೆ.
ಕೆಲವು ಖಾಸಗಿ ಬಂದರುಗಳು ಈ ಉತ್ಪನ್ನದ ಮೇಲೆ ಆಸಕ್ತಿ ತೋರಿಸಿದ್ದು ಅವರ ಜೊತೆ ಮಾತುಕತೆಯಲ್ಲಿದ್ದೇನೆ. ದ್ವೀಪಗಳಲ್ಲಿ ಈ ಸಾಧನವನ್ನು ವಿಶೇಷವಾಗಿ ಬಳಸಬಹುದು ಎನ್ನುತ್ತಾರೆ. ಈ ಸಾಧನದ ವೆಚ್ಚ 12.25 ಲಕ್ಷದಷ್ಟಾಗಿದ್ದು 8.7 ಲಕ್ಷ ಧನಸಹಾಯ ಸಿಕ್ಕಿದೆ. ಈ ಸಾಧನಕ್ಕೆ ಪೇಟೆಂಟ್ ಪಡೆಯಲು ಶೇಖರ್ ಅರ್ಜಿ ಸಲ್ಲಿಸಿದ್ದಾರೆ.
ಇಂದು ವಾಯು ಇಂಧನ ಸೌರಶಕ್ತಿ ಜೊತೆ ಸ್ಪರ್ಧೆಯೊಡ್ಡುತ್ತಿದೆ. ಇದು ಇನ್ನಷ್ಟು ಜನಪ್ರಿಯವಾಗಬೇಕಿದೆ ಎನ್ನುತ್ತಾರೆ ಕ್ಯಾಪ್ಟನ್ ಶೇಖರ್.