ಮೊದಲಿಗೆ ಊಟಕ್ಕೆ ಕರೆದ ರೂಪಾ, ರಘುವಿಗೆ ಗೊತ್ತಾಗದಂತೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ. ಹಾಗೆ ಊಟ ಮಾಡಿದ ಬಳಿಕ ನಿದ್ರೆಗೆ ಜಾರಿದ್ದ ರಘುವಿನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾಳೆ, ಅಲ್ಲದೆ ಈಳಿಗೆಮಣೆಯಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಅವನನ್ನು ಹತ್ಯೆ ಮಾಡಿದ್ದಾಳೆ ಎಂದು ಪೋಲೀಸರು ಹೇಳಿದರು.