ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿಗೆ 111ನೇ ಹುಟ್ಟುಹಬ್ಬ

ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಭಾನುವಾರ 111ನೇ ವಸಂತಕ್ಕೆ ಕಾಲಿಟ್ಟಿದ್ದಾರೆ...
ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿಗೆ 111ನೇ ಹುಟ್ಟುಹಬ್ಬ
ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ್ ಸ್ವಾಮೀಜಿಗೆ 111ನೇ ಹುಟ್ಟುಹಬ್ಬ
Updated on: 
ಬೆಂಗಳೂರು: ನಡೆದಾಡುವ ದೇವರು ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರು ಭಾನುವಾರ 111ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 
ಸಿದ್ದಗಂಗಾ ಮಠದ ಶ್ರೀಗಳ ಹುಟ್ಟಹಬ್ಬ ಹಿನ್ನಲೆಯಲ್ಲಿ ಮಠದಲ್ಲಿ ಭಾರೀ ಸಿದ್ಧತೆಗಳನ್ನು ನಡೆಸಲಾಗಿದ್ದು, ಮಠ ಹಾಗೂ ಇಡೀ ತುಮಕೂರಿನಲ್ಲಿ ಸಂಭ್ರಮ ಕಳೆಕಟ್ಟಿದೆ. 
ರಸ್ತೆಯುದ್ದಕ್ಕೂ ಶ್ರೀಗಳ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಸಂಘ ಸಂಸ್ಥೆಗಳು, ಸ್ವಯಂಸೇವಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ತುಮಕೂರು ನಗರದ ಜನ ಸ್ವಯಂಪ್ರೇರಿರಾಗಿ ಮಠಕ್ಕೆ ಆಗಮಿಸಿ ಮಠದ ಕೆಲಸದಲ್ಲಿ ಭಾಗಿಯಾಗಿದ್ದಾರೆ. 
ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸುತ್ತಿರುವ ಹಿನ್ನಲೆಯಲ್ಲಿ 9 ಕಡೆ ಪ್ರಸಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಪ್ರಸಾಸ ಸೇವೆ ಆರಂಭವಾಗಿದ್ದು, ರಾತ್ರಿ 11ರವರೆಗೆ ನಿರಂತರವಾಗಿ ನಡೆಯಲಿದೆ. 
ಇಂದು ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಅನ್ನ, ಸಾರು, ಚಿತ್ರಾನ್ನ, ಬೂಂದಿ, ಮಾಲ್ದಿ ಸೇರಿದಂತೆ ವಿವಿಧ ಭಕ್ಷ್ಯಗಳು ಭಕ್ತರಿಗೆ ಉಣಬಡಿಸಲು ಸಿದ್ದಗಂಗಾಮಠ ಸಜ್ಜಾಗಿದೆ. ಖುದ್ದು ಶ್ರೀಗಳೇ ಮಠದ ಎಲ್ಲಾ ಉಸ್ತುವಾರಿಗಳನ್ನು ನೋಡಿಕೊಲ್ಳುತ್ತಿದ್ದಾರೆ. 
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶ್ರೀಮಠಕ್ಕೆ ಬರುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಶ್ರೀಮಠದಲ್ಲಿ ಎಲ್ಲಿಯೇ ನೋಡಿದರೂ ಹುಟ್ಟುಹಬ್ಬದ್ದೇ ಸಂಭ್ರಮ. ಶಾಮಿಯಾನ ಹಾಕುವುದು, ಅಡುಗೆ ಕೋಣೆಯಲ್ಲಿ ನೂರಾರು ಮಂದಿ ದಾಸೋಹಕ್ಕೆ ಸಿದ್ಧತೆ ಮಾಡುತ್ತಿರುವುದು ದೃಶ್ಯ ಸಾಮಾನ್ಯವಾಗಿದೆ. 
ಇನ್ನು ಶ್ರೀಗಳ ಜನ್ಮದಿನ ನಿಮಿತ್ತ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟಾರೆಯಾಗಿ ಶ್ರೀಗಳ ಹುಟ್ಟುಹಬ್ಬವನ್ನು ಕಣ್ತುಂಬಿಕೊಳ್ಳಲು ಇಡಿ ನಾಡೇ ಕಾಯುತ್ತಿರುವ ಬೆನ್ನಲ್ಲೇ ಭಕ್ತರನ್ನು ತೃಪ್ತಿಪಡಿಸಲು ಶ್ರೀಮಠ ಹಾಗೂ ಭಕ್ತವೃಂದ ಸಜ್ಜಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com