ಇ-ಮತದಾನಕ್ಕೆ ಆಗ್ರಹಿಸಿ ಹೈಕೋರ್ಟ್ ನಲ್ಲಿ ವಕೀಲರಿಂದ ಅರ್ಜಿ

ದೂರದೂರಿನಲ್ಲಿ ಇದ್ದುಕೊಂಡೇ ಇ-ಮತದಾನದ ಮೂಲಕ ತಮ್ಮ ಹಕ್ಕು ಚಲಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಮೂಲದ ವಕೀಲರೊಬ್ಬರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದೂರದೂರಿನಲ್ಲಿ ಇದ್ದುಕೊಂಡೇ ಇ-ಮತದಾನದ ಮೂಲಕ ತಮ್ಮ ಹಕ್ಕು ಚಲಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರು ಮೂಲದ ವಕೀಲರೊಬ್ಬರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬೇರೆ ಊರಿನಲ್ಲಿ ಇದ್ದುಕೊಂಡೇ ಇ-ಮೇಲ್‌ ಮೂಲಕ ಮತ ಹಾಕಲು ಅವಕಾಶ ಕಲ್ಪಿಸಲು ಒಪ್ಪಿಗೆ ನೀಡಬೇಕು ಎಂದು ಬೆಂಗಳೂರಿನ ಜಯನಗರ ನಿವಾಸಿ ವಕೀಲ ಎಂ.ನರಸಿಂಹಮೂರ್ತಿ ಅವರು ಅರ್ಜಿ ದಾಖಲಿಸಿದ್ದಾರೆ. 
''ಸದ್ಯ ಸರ್ಕಾರಿ ಕೆಲಸದಲ್ಲಿರುವವರು ಅಂಚೆ ಮೂಲಕ ಮತ ಚಲಾಯಿಸಬಹುದು. ಆದರೆ ಈ ಅವಕಾಶ ಮತಕ್ಷೇತ್ರದಿಂದ ದೂರವಿರುವವವರಿಗೆ ಇಲ್ಲ. ಇದರಿಂದ ಅಂತಹವರ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಮತಪಟ್ಟಿಯಲ್ಲಿ ಹೆಸರಿದ್ದು, ಮತದಾನದ ದಿನದ ವೇಳೆ ಸ್ಥಳಕ್ಕಾಗಮಿಸಲಾಗದವರೂ ಮತದಾನ ಮಾಡಲಾಗುತ್ತಿಲ್ಲ. ಕ್ಷೇತ್ರದಿಂದ ಹೊರಗಿರುವವರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಇ-ಮೇಲ್‌ ಮೂಲಕ ಮತ ಹಾಕಲು ಆಯೋಗ ಮುಂದಾಗಲಿ,'' ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. 
ಇನ್ನು ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ನ್ಯಾಯಮೂರ್ತಿ ಸುನಿಲ್ ದತ್ ನೇತೃತ್ವದ ದ್ವಿಸದಸ್ಯ ಪೀಠ, ಬೇರೆ ಊರಿ (ಸ್ವದೇಶ ಅಥವಾ ವಿದೇಶ)ನಲ್ಲಿ ಇದ್ದುಕೊಂಡೇ ಇ-ಮೇಲ್‌ ಮೂಲಕ ಮತ ಹಾಕಲು ಅವಕಾಶ ಕಲ್ಪಿಸಲು ಒಪ್ಪಿಗೆ ನೀಡುವ ಕುರಿತು ಕೇಂದ್ರ ಚುನಾವಣೆ ಆಯೋಗ ಹಾಗೂ ಕೇಂದ್ರ ಕಾನೂನು ಸಚಿವಾಲಯಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com