ಬೆಂಗಳೂರು: ಪೊಲೀಸರ ಸೋಗಿನಲ್ಲಿ ವ್ಯಕ್ತಿಯಿಂದ 50 ಲಕ್ಷ ರು. ದರೋಡೆ

ಅರೆಸೇನಾ ಪಡೆಯ ಸಿಬ್ಬಂದಿ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು, ಮೆಜೆಸ್ಟಿಕ್ ನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಧನುಷ್ ಎಂಬುವರಿಂದ 50 ರು.ಲಕ್ಷ ಕದ್ದುಕೊಂಡು .
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಅರೆಸೇನಾ ಪಡೆಯ ಸಿಬ್ಬಂದಿ ಸೋಗಿನಲ್ಲಿ ದುಷ್ಕರ್ಮಿಗಳಿಬ್ಬರು, ಮೆಜೆಸ್ಟಿಕ್ ನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಧನುಷ್ ಎಂಬುವರಿಂದ 50 ರು.ಲಕ್ಷ ಕದ್ದುಕೊಂಡು ಪರಾರಿಯಾಗಿದ್ದಾರೆ.
ತುಮಕೂರಿನ ಧನುಷ್, ಹಣದ ಬ್ಯಾಗ್ ಸಮೇತ ಮೇ 9ರಂದು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಅವರ ಬಳಿ ಹೋಗಿದ್ದ ದುಷ್ಕರ್ಮಿಗಳು, ‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ನಿಮ್ಮ ಬ್ಯಾಗ್‌ ಪರಿಶೀಲನೆ ಮಾಡಬೇಕಿದೆ’ ಎಂದಿದ್ದರು. ಅದನ್ನು ನಂಬಿ ಬ್ಯಾಗ್‌ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.
ಹಣ ನೋಡಿದ ಆರೋಪಿಗಳು, ‘ಇದನ್ನು ಎಲ್ಲಿಂದ ತಂದಿದ್ದಿಯಾ. ಹಣ ಸಾಗಣೆ ಆರೋಪದಡಿ ನಿನ್ನನ್ನು ಬಂಧಿಸುತ್ತೇವೆ’ ಎಂದು ಹೇಳಿ ಧನುಷ್‌ರನ್ನು ಉಪ್ಪಾರಪೇಟೆ ಠಾಣೆಯವರೆಗೆ ಕರೆತಂದಿದ್ದರು. ಠಾಣೆ ಎದುರೇ ಕುಳಿತುಕೊಳ್ಳುವಂತೆ ಹೇಳಿ ಹಣದ ಬ್ಯಾಗ್‌ ಸಮೇತ ಹೊರಟು ಹೋಗಿದ್ದಾರೆ.
ಧನುಷ್ ಸ್ನೇಹಿತ ಮಂಜುನಾಥ್  ಹಾರ್ಡ್‌ವೇರ್‌ ಮಳಿಗೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮಂಜುನಾಥ್‌ ಎಂಬುವರಿಂದ ಹಣ ಪಡೆದುಕೊಂಡು ಬರಲು ಬಂದಿದ್ದರು. ಹಣ ಪಡೆದುಕೊಂಡು ವಾಪಸ್‌ ಊರಿಗೆ ಹೋಗಲು ನಿಲ್ದಾಣಕ್ಕೆ ಬಂದಾಗಲೇ ಈ ಘಟನೆ ನಡೆದಿದೆ’ ಎಂದು ಧನುಷ್‌ ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com