ಶಿರಾ ಬಳಿ ಭೀಕರ ರಸ್ತೆ ಅಪಘಾತ: ಲಾರಿ-ಬಸ್ ಡಿಕ್ಕಿ; 7 ಸಾವು, 20 ಮಂದಿಗೆ ಗಾಯ
ವೇಗವಾಗಿ ಬರುತ್ತಿಲ್ಲ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 7 ಮಂದಿ ದುರ್ಮರಣವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ...
ಶಿರಾ ಬಳಿ ಭೀಕರ ರಸ್ತೆ ಅಪಘಾತ: ಲಾರಿ-ಬಸ್ ಡಿಕ್ಕಿ; 7 ಸಾವು, 20 ಮಂದಿಗೆ ಗಾಯ
ತುಮಕೂರು; ವೇಗವಾಗಿ ಬರುತ್ತಿಲ್ಲ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 7 ಮಂದಿ ದುರ್ಮರಣವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಸಿಂಗದೂರಿನಿಂದ ಶಿರಾ ಕಡೆಗೆ ಬಸ್ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಸ್ಸಿನಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಹನುಮಾನ್ ಟ್ರಾವೆಲ್ಸ್'ಗೆ ಸೇರಿದ ಖಾಸಗಿ ಬಸ್ ಹೆದ್ದಾರಿ ಎಡಭಾಗದಲ್ಲಿ ನಿಂತಿದ್ದ ಲಾರಿಗೆ ರಭಸದಿಂದ ಡಿಕ್ಕಿ ಹೊಡೆದಿದೆ.
ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರೂ ಸಿಗಂಧೂರಿನ ಚೌಡೇಶ್ವರಿ ದೇಗುಲಕ್ಕೆ ಮೇ.19 ರಂದು ತೆರಳಿದ್ದರು, ಮೇ.20ರಂದು ರಾತ್ರಿ ಹಿಂತಿರುಗಿ ಶಿರಾಗೆ ಬರುತ್ತಿದ್ದರು. ಶಿರಾ ನಗರ ತಲುಪಲು 3 ಕಿ.ಮೀ. ದೂರದಲ್ಲಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಮೃತರನ್ನು ಅನುಷಾ (7), ಸವಿತಾ (21) , ರತ್ನಮ್ಮ (39) , ಶಂಕರ (38) , ಸುಮಲತಾ (21) , ಗಿರಿಜಮ್ಮ (55) , ಅಶ್ವಥ ನಾರಾಯಣ (40) ಎಂದು ಗುರ್ತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ 20 ಮಂದಿಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.