ಜೂನ್ 2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ

ರಾಜ್ಯಕ್ಕೆ ಮೂರು ದಿನ ಮೊದಲೇ ಅಂದರೆ ಜೂನ್ 2ರಂದು ಮಾನ್ಸೂರ್ ಮಾರುತಗಳು ಪ್ರವೇಶ ಮಾಡಲಿದೆ ಎಂದು ಎಂದು ಹವಮಾನ ಇಲಾಖೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಾಜ್ಯಕ್ಕೆ ಮೂರು ದಿನ ಮೊದಲೇ ಅಂದರೆ ಜೂನ್ 2ರಂದು ಮಾನ್ಸೂರ್ ಮಾರುತಗಳು ಪ್ರವೇಶ ಮಾಡಲಿದೆ ಎಂದು ಎಂದು ಹವಮಾನ ಇಲಾಖೆ ಹೇಳಿದೆ.
ಈ ಹಿಂದೆ ಹವಾಮಾನ ಇಲಾಖೆ ಜೂನ್ 5ರಂದು ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ವರದಿ ನೀಡಿದ್ದವು. ಆದರೆ ಇತ್ತೀಚೆಗಿನ ವರದಿಗಳ ಅನ್ವಯ ಮೂರು ದಿನಗಳ ಮೊದಲೇ ಅಂದರೆ ಜೂನ್ 2ರಂದೇ ಮಾನ್ಸೂನ್ ಮಾರುತಗಳ ರಾಜ್ಯಕ್ಕೆ ಪ್ರವೇಶ ಮಾಡಲಿವೆ. 
ನೈಋತ್ಯ ಮಾನ್ಸೂನ್ ಈ ಬಾರಿ ಮೇ 29 ರಂದು ಅಥವಾ ಮೇ 30ರಂದು ಕೇರಳ ಪ್ರವೇಶಿಸಲಿದ್ದು, ಕರ್ನಾಟಕಕ್ಕೆ ಜೂನ್ 2ರಂದು ಪ್ರವೇಶ ಮಾಡಲಿವೆ. ಅಂತೆಯೇ ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದೆಲ್ಲೆಡೆ ಬಿರುಗಾಳಿ ಸಹಿತ  ಮಳೆಯಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ದಕ್ಷಿಣದ ಒಳನಾಡಿನಲ್ಲಿ ಮತ್ತೆ ಮಳೆ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 26 ರ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಹೇಳಿದೆ.
ಅತ್ಯುತ್ತಮ ಮಾನ್ಸೂನ್ ಪೂರ್ವ ಮಳೆ
ಇನ್ನು ಪ್ರಸಕ್ತ ಸಾಲಿನಲ್ಲಿ ಮಾನ್ಸೂನ್ ಗೂ ಮುನ್ನ ಅತ್ಯುತ್ತಮ ಮಳೆಯಾಗಿದ್ದು, ಇದು ಈ ವರೆಗೂ ದಾಖಲಾದ ಅತ್ಯುತ್ತಮ ಮಾನ್ಸೂನ್ ಪೂರ್ವ ಮಳೆ ಎಂದು ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಪರಿವೀಕ್ಷಣಾ ಕೇಂದ್ರ ನೀಡಿರುವ ಮಾಹಿತಿಯನ್ವಯ ಮೇ 23ರವರೆಗೂ ರಾಜ್ಯದಲ್ಲಿ 101.6 ಮಿ.ಮೀ ಮಳೆಯಾಗಿದೆ. ಮಾರ್ಚ್ 1 ರಿಂದ ಮೇ 23 ರವರೆಗೆ 101.6  ಮಳೆಯಾಗಿದೆ. ಮಾರ್ಚ್ 23ರಿಂದ ಇಲ್ಲಿಯವರೆಗೂ 140.87 ಮಿ,ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
2013 ಮತ್ತು 2017ರಲ್ಲಿ ಅತ್ಯುತ್ತಮ ಮಾನ್ಸೂನ್ ಪೂರ್ವ ಮಳೆಯಾಗಿತ್ತು. ಆದರೆ ಈ ಬಾರಿ ಈ ದಾಖಲೆಯನ್ನೂ ಮೀರಿದ ಮಳೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com