

ಬೆಂಗಳೂರು: ಗುಂಡ್ಲುಪೇಟೆ ತಹಸೀಲ್ದಾರ್ ಬಿ.ಕೆ. ಸುದರ್ಶನ್ ಅವರಿಗೆ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಯಂತ್ರ ದಳದ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿ ಬೆಂಗಳೂರಿನ ಪ್ರಸಾದ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಕರ್ತವ್ಯಕ್ಕೆ ಚುತಿ ತಂದಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಸುದರ್ಶನ್ ನಿನ್ನೆ ಬೆಳಗ್ಗೆ ದೂರು ದಾಖಲಿಸಿದ್ದರು.