ಮಂಡ್ಯ ಅಪಘಾತ: 30 ಮಂದಿಗಳ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು

ಮಂಡ್ಯದಲ್ಲಿ ನಾಲೆಗೆ ಬಿದ್ದು 30 ಮಂದಿಗೆ ಸಾವಿಗೆ ಕಾರಣವಾದ ಖಾಸಗಿ ಬಸ್ ಮಂಗಳೂರು ಮೂಲದ್ದಾಗಿದ್ದು, ಆದರೆ, ಅವಧಿ ಮೀರಿದ ಬಸ್ಸನ್ನು ಸಂಚಾರಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ...
ಮಂಡ್ಯ ಅಪಘಾತ: 30 ಮಂದಿಯ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು
ಮಂಡ್ಯ ಅಪಘಾತ: 30 ಮಂದಿಯ ಸಾವಿಗೆ ಕಾರಣವಾದ ಬಸ್ ಮಂಗಳೂರು ಮೂಲದ್ದು
Updated on: 
ಮಂಡ್ಯ: ಮಂಡ್ಯದಲ್ಲಿ ನಾಲೆಗೆ ಬಿದ್ದು 30 ಮಂದಿಗೆ ಸಾವಿಗೆ ಕಾರಣವಾದ ಖಾಸಗಿ ಬಸ್ ಮಂಗಳೂರು ಮೂಲದ್ದಾಗಿದ್ದು, ಆದರೆ, ಅವಧಿ ಮೀರಿದ ಬಸ್ಸನ್ನು ಸಂಚಾರಕ್ಕೆ ಬಳಸಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ. 
ಮಂಗಳೂರಿನ ಸಾರಿಗೆ ಉದ್ಯಮಿ ಅಡ್ಯಾರಿನ ಮಾಧವ ನಾಯಕ ಎಂಬುವವರು 15 ವರ್ಷಗಳ ಹಿಂದೆ ಬಸ್'ನ್ನು ಖರೀದಿ ಮಾಡಿದ್ದರು, ಮಂಗಳೂರು-ಉಡುಪಿ ಮಧ್ಯೆ ಈ ಬಸ್ ಸಂಚರಿಸುತ್ತಿತ್ತು. ಕೆಲ ವರ್ಷಗಳ ಬಳಿಕ ಮಾಲೀಕ ಬಸ್'ನ್ನು ಮಾರಾಟ ಮಾಡಿದ್ದರು. ಪ್ರಸಕ್ತ ಈ ನತದೃಷ್ಟ ಬಸ್ 9ನೇ ಮಾಲೀಕರ ಕೈಯಲ್ಲಿದೆ. 
8ನೇ ಮಾಲೀಕರಾದ ಮಂಗಳೂರಿನ ಶಾಂಭವಿ ರಾಘವ ಎಂಬುವವರು ಈ ಬಸ್'ನ್ನು ಮಂಡ್ಯದ ಶ್ರೀನಿವಾಸ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ಬಸ್'ನ್ನು ಮಂಡ್ಯದ ಶ್ರೀನಿವಾಸ ಎಂಬುವವರು ಖರೀಸಿದ್ದರು. 
ಸಾಮಾನ್ಯವಾಗಿ ಒಂದು ಖಾಸಗಿ ಬಸ್'ನ್ನು ಆಯಸ್ಸು ಸಾರಿಗೆ ಇಲಾಖೆ ನಿಯಮಗಳ ಪ್ರಕಾರ ಗರಿಷ್ಠ ಎಂದರೆ 15 ವರ್ಷ. ಆದರೆ, ಈ ಬಸ್'ನ ಆಯಸ್ಸು ಮಂಡ್ಯ ಸಾರಿಗೆ ಇಲಾಖೆಯ ದಾಖಲೆಗಳು ತೋರಿಸಿರುವಂತೆ ಹದಿನೇಳೂವರೆ ವರ್ಷ. ವಿಚಿತ್ರವೆಂದರೆ ಈ ಬಸ್'ಗೆ 2019ರ ವರೆಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡಲಾಗಿದೆ. ಜೊತೆಗೆ ಇನ್ಶುರೆನ್ಸ್ ಮತ್ತು ಟ್ಯಾಕ್ಸ್ ಕೂಡ ಅದೇ ದಿನಾಂಕದವರೆಗೆ ಮುಂದುವರೆದಿದೆ. ಆದರೂ ಬಸ್ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. 
ಸ್ಟೇರಿಂಗ್ ತುಂಡಾಗಿ ಬಸ್ ನಾಲೆಗೆ ಉರುಳಿರುವುದೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಚ್ಚರಿಯಂದರೆ ಈ ಬಸ್ ಸಂಚಾರಕ್ಕೆ ಅನುಮತಿ ನೀಡಲು ಮಂಗಳೂರಿನ ಸಾರಿಗೆ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದರು. ಗುಜರಿಗೆ ಹೋಗಬೇಕಿದ್ದ ಈ ಬಸ್'ನ್ನು ಮಂಡ್ಯ ವ್ಯಕ್ತಿ ಖರೀದಿಸಿ, ರಸ್ತೆಗಿಳಿಸಿದ್ದ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com