ಈ ವರ್ಷದ ದಸರಾಕ್ಕೆ, ಬೆಂಗಳೂರು-ಮೈಸೂರು ನಡುವೆ ಅಲೈಯನ್ಸ್ ಏರ್ ಹಾರಾಟ!

ಏರ್ ಇಂಡಿಯಾದ ಉಪ ಸಂಸ್ಥೆ ಅಲೈಯನ್ಸ್ ಏರ್ ಮೈಸೂರು ದಸರಾ ಪ್ರಯುಕ್ತ ಬೆಂಗಳೂರಿನಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಏರ್ ಇಂಡಿಯಾದ ಉಪ ಸಂಸ್ಥೆ ಅಲೈಯನ್ಸ್ ಏರ್ ಮೈಸೂರು ದಸರಾ ಪ್ರಯುಕ್ತ ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ನೀಡಲು ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿದ ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಮನೋಜ್ ಕುಮಾರ್ ಸಿಂಗ್, ಅಲೈಯನ್ಸ್ ಏರ್ ನಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ವಿಮಾನಯಾನ ಸಂಸ್ಥೆ 70 ಸೀಟುಗಳ ಎಟಿಆರ್ -72 ವಿಮಾನ ಅಕ್ಟೋಬರ್ 10ರಿಂದ ಅಕ್ಟೋಬರ್ 20ರವರೆಗೆ ಸಂಚಾರ ನಡೆಸಲಿದೆ ಎಂದರು.

ವಿಮಾನ, ಬೆಂಗಳೂರಿನಿಂದ ಸಂಜೆ 3 ಗಂಟೆಗೆ ಹೊರಟು ಮೈಸೂರಿಗೆ 3.30ಕ್ಕೆ ತಲುಪಲಿದೆ. ಮೈಸೂರಿನಿಂದ ಸಂಜೆ 4ಕ್ಕೆ ಹೊರಡಲಿದೆ. ದರ ಇನ್ನೂ ನಿಗದಿಯಾಗಿಲ್ಲ. ದಸರಾಕ್ಕೆ ಹೋಗುವವರ ಜನದಟ್ಟಣೆ ಇರುವುದರಿಂದ ರಾಜ್ಯ ಸರ್ಕಾರ ಮತ್ತು ವಿಮಾನಯಾನ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಈ ಮಧ್ಯೆ ಚೆನ್ನೈ ಮೂಲಕ ಹೈದಾರಾಬಾದ್-ಮೈಸೂರು ನಡುವೆ ವಿಮಾನ ಹಾರಾಟ ನಡೆಸುವ ಟ್ರುಜೆಟ್ ಗೆ ಸಹ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸೇವೆ ಕಳೆದ ವರ್ಷ ದಸರಾಕ್ಕೆ ಆರಂಭವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com