ಬೆಂಗಳೂರು: ಪ್ರೇಯಸಿಯ ಜಾಲಿ ರೈಡ್ ಗೀಳು; ಎಂಟು ಬೈಕ್ ಕದ್ದಿದ್ದ ರೋಮಿಯೋ ಬಂಧನ!

ತನ್ನ ಪ್ರಿಯತಮೆಯನ್ನು ಇಂಪ್ರೆಸ್ ಮಾಡುವ ಸಲುವಾಗಿ ಬೈಕ್ ಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...
ಬಂಧಿತ ಆರೋಪಿ ಕಾರ್ತಿಕ್
ಬಂಧಿತ ಆರೋಪಿ ಕಾರ್ತಿಕ್
Updated on

ಬೆಂಗಳೂರು: ತನ್ನ ಪ್ರಿಯತಮೆಯನ್ನು ಇಂಪ್ರೆಸ್ ಮಾಡುವ ಸಲುವಾಗಿ ಬೈಕ್ ಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ

ಜಾಲಿ ರೈಡ್‌ ಮತ್ತು ಮೋಜಿನ ಜೀವನಕ್ಕಾಗಿ ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 8 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೊಮ್ಮನಹಳ್ಳಿಯ ಕಾರ್ತಿಕ್‌ ಅಲಿಯಾಸ್‌ ಬಂಧಿತ.  ಆರೋಪಿ. ಬಡ ಕುಟುಂಬದಿಂದ ಬಂದ ಕಾರ್ತಿಕ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ.. ಆಕೆಯೊಂದಿಗೆ ಜಾಲಿರೈಡ್‌ ಹೋಗಲು ಪಲ್ಸರ್‌ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ .ಈಗಾಗಲೇ ಆತನ ವಿರುದ್ದ 2 ಬೈಕ್ ಕಳ್ಳತನ ಸೇರಿದಂತೆ ಸಣ್ಣಪುಟ್ಟ ಕೇಸುಗಳು ದಾಖಲಾಗಿದ್ದವು.

ಒಮ್ಮೆ ಹೋದ ಬೈಕ್‌ನಲ್ಲಿ ಮತ್ತೆ ಹೋಗಲು ಪ್ರೇಯಸಿ ಇಷ್ಟ ಪಡುತ್ತಿರಲಿಲ್ಲ. ಅದರಲ್ಲೂ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ಗಳಲ್ಲಿ ಸುತ್ತಾಡಲು ಆಸೆ ಪಡುತ್ತಿದ್ದಳು. ಆಕೆಯ ಆಸೆಯನ್ನು ಈಡೇರಿಸಲು ಪಲ್ಸರ್‌ಗಳನ್ನೇ ಕದ್ದು ಲಾಂಗ್‌ ರೈಡ್‌ ಹೋಗುತ್ತಿದ್ದೆ ಎಂದು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ.

ನಂತರ ಆತನ ಗರ್ಲ್ ಫ್ರೆಂಡ್ ಅನ್ನು ಪೊಲೀಸರು ಚಾರಣೆಗೊಳಪಡಿಸಿದಾಗ, ನಿಜವಾಗಿಯೂ ಆತ ಬೈಕ್ ಕಳ್ಳತನ ಮಾಡುತ್ತಿದ್ಗಾನೆಂದು ತಿಳಿದಿರಲಿಲ್ಲ, ಕೇಳಿದಾಗ ನನ್ನ್ ಫ್ರೆಂಡ್ ಗಳದ್ದು ಎಂದು ಹೇಳುತ್ತಿದ್ದ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com