ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ 16 ಹಂದಿ ಜ್ವರ ಪ್ರಕರಣ ಪತ್ತೆಯಾಗಿದೆ. 52 ಸ್ಯಾಂಪಲ್ ಗಳನ್ನು ಕಳುಹಿಸಲಾಗಿತ್ತು, ಕಳೆದ ಜನವರಿಯಿಂದ 16 ಪ್ರಕರಣಗಳು ಪತ್ತೆಯಾಗಿವೆ.
ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲೇ ಹೆಚ್ಚಿನ ಪ್ರಕರಣಗಳು ಕಂಡು ಬಂದಿವೆ, ಕರ್ನಾಟಕ ಹೊರತು ಪಡಿಸಿ ತೆಲಂಗಾಣದಲ್ಲೂ ಕೂಡ ಹಂದಿ ಜ್ವರ ಪ್ರಕರಣಗಳು ಪತ್ತೆಯಾಗಿವೆ, ತೆಲಂಗಾಣದಲ್ಲಿ ಸುಮಾರು 50 ಹಂದಿ ಜ್ವರ ಪ್ರಕರಣ ಪತ್ತೆಯಾಗಿವೆ.