ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪಾಸ್'ಪೋರ್ಟ್ (ಆರ್'ಪಿಒ) ಅಧಿಕಾರಿ ಭರತ್ ಕುಮಾರ್ ಕುಥಾಟಿಯವರು, ಪೊಲೀಸರು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅಥವಾ ಪಾಸ್'ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯೇ ಠಾಣೆಗೆ ಬರುವುದು ಇನ್ನು ಮುಂದೆ ಕಡ್ಡಾಯವಾಗಿರುವುದಿಲ್ಲ. ಪೊಲೀಸರು ವ್ಯಕ್ತಿಯ ನಾಗರೀಕತ್ವವನ್ನು ದೃಢಪಡಿಸಬೇಕು. ವ್ಯಕ್ತಿಯ ಹಿನ್ನಲೆ ಹಾಗೂ ಕ್ರಿಮಿನಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಬೇಕಾಗುತ್ತದೆ. ಮನೆಗಳಿಗೆ ಭೇಟಿ ನೀಡಿಯೇ ಪರಿಶೀಲನೆ ನಡೆಸಬೇಕೆಂದು ಪೊಲೀಸರಿಗೆ ಎನಿಸಿದರೆ ಅವರು ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ.