ಬೆಂಗಳೂರು: ಸಂಬಂಧಿಕನ ಅತ್ಯಾಚಾರದಿಂದ ಬಯಲಾಯ್ತು ಮಗಳ ಮೇಲೆ ತಂದೆಯ ನಿರಂತರ ಅತ್ಯಾಚಾರ ವಿಷಯ!

ಸಂಬಂಧಿಕನೊಬ್ಬ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಈ ಪ್ರಕರಣದಿಂದ ಆಕೆಯ ಮೇಲೆ ತಂದೆಯೇ ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಸಂಬಂಧಿಕನೊಬ್ಬ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದು ಈ ಪ್ರಕರಣದಿಂದ ಆಕೆಯ ಮೇಲೆ ತಂದೆಯೇ ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ನಡೆಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ದಕ್ಷಿಣ ಕನ್ನಡದ ಉಲ್ಲಾಳದಲ್ಲಿ ವಾಸವಾಗಿರುವ ಸಂತ್ರಸ್ತೆ ಯುವತಿ ಹಾಗೂ ಆಕೆಯ ತಾಯಿ ಅನಾರೋಗ್ಯ ಪೀಡಿತ ಸಂಬಂಧಿಕರೊಬ್ಬರ ತಾಯಿಯನ್ನು ನೋಡಲು ಬೆಂಗಳೂರಿನ ಉಲ್ಲಾಳಕ್ಕೆ ಬಂದಿದ್ದರು. ಕಳೆದ ಬುಧವಾರ ರಾತ್ರಿ ಸಂತ್ರಸ್ತ ಯುವತಿ ಮಲಗಿದ್ದಾಗ ಸಂಬಂಧಿಕನೊಬ್ಬ ಆಕೆಯನ್ನು ಅತ್ಯಾಚರಿಸಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆಯೊಡ್ಡಿದ್ದಾನೆ. 
ಆದರೆ ಯುವತಿ ಈ ವಿಷಯವನ್ನು ತಾಯಿ ಬಳಿ ಹೇಳಿಕೊಂಡಿದ್ದು ಬಳಿಕ ಇಬ್ಬರು ಬಂದು ಉಲ್ಲಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಸಂಬಂಧಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಆಕೆಯ ತಂದೆಯಂತೆ ನಾನು ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾದೆ ಎಂದು ಹೇಳಿದ್ದಾನೆ. 
ಕೂಡಲೇ ಪೊಲೀಸರು ಯುವತಿಯನ್ನು ವಿಚಾರಿಸಿದಾಗ ಆಕೆ ತನ್ನ ತಂದೆಯೇ ಒಂದು ವರ್ಷದಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾಳೆ. ಸದ್ಯ ಪ್ರಕರಣವನ್ನು ಬಂಟ್ವಾಳ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ಬಂಟ್ವಾಳ ಪೊಲೀಸರು ದೂರು ದಾಖಲಿಸಿ ಆರೋಪಿ ತಂದೆಗಾಗಿ ಶೋಧ ಕಾರ್ಯಾ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com