ಬೆಳಗಾವಿಯಲ್ಲಿ ಐಟಿ ದಾಳಿ: ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ

ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14
ಬೆಳಗಾವಿಯಲ್ಲಿ ಐಟಿ ದಾಳಿ: ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ
ಬೆಳಗಾವಿಯಲ್ಲಿ ಐಟಿ ದಾಳಿ: ಲಕ್ಷ್ಮಿಹೆಬ್ಬಾಳ್ಕರ್ ಬೆಂಬಲಿಗನ ಬಳಿ 14 ಲಕ್ಷ ಹಣ ಪತ್ತೆ, ಬಂಧನ
Updated on: 
ಬೆಳಗಾವಿ: ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಸದರು, ಶಾಸಕರ ಬೆಂಬಲಿಗರ ನಿವಾಸಗಳು ಮತ್ತು ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಸೋಮವಾರ ಬೆಳಗ್ಗೆಯಿಂದಲೇ ದಾಳಿನಡೆಸಿ, ಸುಮಾರು 14 ಲಕ್ಷ ರೂಪಾಯಿ ಲೆಕ್ಕವಿಡದ ಹಣ ಮುಟ್ಟುಗೋಲುಹಾಕಿಕೊಂಡಿದ್ದಾರೆ.
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬೆಂಬಲಿಗ ಶ್ರೀಕಾಂತ್ ಮುನವಳ್ಳಿ ಅವರ ಕಾರು ತಡೆದು ತಪಾಸಣೆ ನಡೆಸಿದ್ದು, ಅದರಲ್ಲಿ ಅಡಗಿಸಿಟ್ಟಿದ್ದ 14ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಶ್ರೀಕಾಂತ್ ಮುನವಳ್ಳಿ ಅವರನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.  
ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಬೆಂಬಲಿಗ ಶಂಕರ ಗೌಡ ಪಾಟೀಲ ಎಂಬುವರ ನಿವಾಸ ಹಾಗೂ ತೋಟದ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧಿಸಿ, ತೆರಿಗೆ ವಂಚನೆಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಮತ್ತೊಂದು ಪ್ರಕರಣದಲ್ಲಿ ಬೆಳಗಾವಿ ತಾಲೊಕು ಕೊಪ್ಪ ಗ್ರಾಮದ ಸುರೇಶ್ ಗೌಡ ಪಾಟೀಲ ನಿವಾಸದ ಮೇಲೆ ಅಧಿಕಾರಿಗಳು ದಾಳಿ  ನಡೆಸಿ 4.5ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com