ಕೊಪ್ಪಳ: ಆಟವಾಡುವಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳ ದುರ್ಮರಣ!

ಆಡುತ್ತಿದ್ದ ಮಕ್ಕಳ ಮೇಲೆ ಮರಳ ದಿಬ್ಬ ಕುಸಿದ ಪ ರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳದ ಕನಕಗಿರಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 
ಆಟವಾಡುವಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳ ದುರ್ಮರಣ!
ಆಟವಾಡುವಾಗ ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳ ದುರ್ಮರಣ!
Updated on: 

ಕೊಪ್ಪಳ: ಆಡುತ್ತಿದ್ದ ಮಕ್ಕಳ ಮೇಲೆ ಮರಳ ದಿಬ್ಬ ಕುಸಿದ ಪ ರಿಣಾಮ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಕೊಪ್ಪಳದ ಕನಕಗಿರಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರು ಪುಣೆ ಮೂಲದ ಕೂಲಿ ಕಾರ್ಮಿಕರ ಮಕ್ಕಳಾದ ಸೋನು (7), ಸವಿತಾ (4) ಮತ್ತು ಕವಿತಾ (2) ಎಂದು ಗುರುತಿಸಲಾಗಿದೆ.

ಕನಕಗಿರಿಯ ನವಲಿ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಆಗಮಿಸಿದ್ದ ಈ ಕುಟುಂಬಗಳ ಮಕ್ಕಳು ತಮ್ಮ ಪೋಷಕರು ಕೆಲಸದಲ್ಲಿ ನಿರತವಾಗಿದ್ದಾಗ ಕಾರ್ಖಾನೆ ಸಮೀಪವೇ ಆಟವಾಡುತ್ತಿದ್ದರು. ಆದರೆ ಆ ಸಮಯದಲ್ಲಿ ಆಕಸ್ಮಿಕವಾಗಿ ಮರಳಿನ ದಿಬ್ಬ ಕುಸಿದು ಬಿದ್ದು ಮರಳಿನೊಳಗೆ ಸಿಕ್ಕಿ ಉಸಿರುಗಟ್ಟಿದ ಪರಿಣಾಮ ಮೂವರು ಮಕ್ಕಳು ಮೃತಪಟ್ಟಿದ್ದಾರೆ.

ಇನ್ನು ಘಟನೆ ನಡೆವ ವೇಳೆ ಒಟ್ಟು ಐದು ಮಕ್ಕಳು ಆಟವಾಡುತ್ತಿದ್ದರು. ಆದರೆ ಅದರಲ್ಲಿ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ಕುರಿತಂತೆ ಕನಕಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com