ಪೌರತ್ವ ಕಾಯ್ದೆ ಪ್ರತಿಭಟನೆಯಲ್ಲಿ ಭಾಗಿಯಾಗದಿದ್ದರೂ ನನ್ನ ತಮ್ಮ ಜಲೀಲ್ ಸಾವನ್ನಪ್ಪಿದ: ಸಹೋದರ

ಪೌರತ್ವ ಕಾಯ್ದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ ಆದರೂ ಮನೆಯ ಬಳಿಯೇ ಇದ್ದ ನನ್ನ ತಮ್ಮ ಸಾವಿಗೀಡಾಗಿದ್ದಾನೆಂದು ಮಂಗಳೂರು ಹಿಂಸಾಚಾರದ ವೇಳೆ ನಡೆದ ಗೋಲಿಬಾರ್ ನಲ್ಲಿ ಸಾವಿಗೀಡಾಗಿದ್ದ ಜಲೀಲ್ ಸಹೋದರ ಕಣ್ಮೀರು ಹಾಕಿದ್ದಾರೆ. 
ಪೌರತ್ವ ಕಾಯ್ದೆ ಪ್ರತಿಭಟನೆಯಲ್ಲಿ ಭಾಗಿಯಾಗದಿದ್ದರೂ ನನ್ನ ತಮ್ಮ ಜಲೀಲ್ ಸಾವನ್ನಪ್ಪಿದ: ಸಹೋದರ
ಪೌರತ್ವ ಕಾಯ್ದೆ ಪ್ರತಿಭಟನೆಯಲ್ಲಿ ಭಾಗಿಯಾಗದಿದ್ದರೂ ನನ್ನ ತಮ್ಮ ಜಲೀಲ್ ಸಾವನ್ನಪ್ಪಿದ: ಸಹೋದರ

ಮಂಗಳೂರು: ಪೌರತ್ವ ಕಾಯ್ದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ ಆದರೂ ಮನೆಯ ಬಳಿಯೇ ಇದ್ದ ನನ್ನ ತಮ್ಮ ಸಾವಿಗೀಡಾಗಿದ್ದಾನೆಂದು ಮಂಗಳೂರು ಹಿಂಸಾಚಾರದ ವೇಳೆ ನಡೆದ ಗೋಲಿಬಾರ್ ನಲ್ಲಿ ಸಾವಿಗೀಡಾಗಿದ್ದ ಜಲೀಲ್ ಸಹೋದರ ಕಣ್ಮೀರು ಹಾಕಿದ್ದಾರೆ. 

ಮಂಗಳೂರು ಉತ್ತರ ಪೊಲೀಸ್ ಠಾಣೆ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸುತ್ತಿದ್ದ ವೇಳೆ ನಡೆದ ಗೋಲಿಬಾರ್ ನಲ್ಲಿ ಜಲೀಲ್ ಸಾವನ್ನಪ್ಪಿದ್ದ ಎಂದು ಈ ಹಿಂದೆ ಪೊಲೀಸ್ ಆಯುಕ್ತ ಪಿ.ಎಸ್. ಹರ್ಷ ಅವರು ಹೇಳಿಕೆ ನೀಡಿದ್ದರು. 

ಈ ಹೇಳಿಕೆಯನ್ನು ಜಲೀಲ್ ಸಹೋದರ ಮೊಹಮ್ಮದ ಯಹಿಯಾ ತಿರಸ್ಕರಿಸಿದ್ದು, ನನ್ನ ತಮ್ಮ ಪ್ರತಿಭಟನೆಯಲ್ಲಿಯೇ ಭಾಗಿಯಾಗಿರಲಿಲ್ಲ. ಮನೆಯ ಬಳಿಯೇ ಇದ್ದ ನನ್ನ ತಮ್ಮ ಮೇಲೆ ಗುಂಡು ಹಾರಿದೆ ಎಂದು ಹೇಳಿದ್ದಾರೆ. 

ನನ್ನ ತಮ್ಮ ಅವರ ಮಕ್ಕಳಾದ ಶಿಫಾನಿ ಹಾಗೂ ಸಬಿಲ್ ನನ್ನ ಮನೆಗೆ ಬಿಡಲು ಬಂದಿದ್ದರು. ಮಕ್ಕಳನ್ನು ಮನೆಗೆ ಬಿಟ್ಟ ಬಳಿಕ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡು ಅವರ ಕಣ್ಣಿಗೆ ಬಿದ್ದಿತ್ತು ಎಂದು ತಿಳಿಸಿದ್ದಾರೆ. 

ಹಿಂಸಾಚಾರದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ವೇಳೆ ವೈದ್ಯರು ಸಾವನ್ನಪ್ಪಿದ್ದಾರೆಂದು ಘೋಷಣೆ ಮಾಡಿದ್ದರು. ಮನೆಯಲ್ಲಿ ದುಡಿಯುತ್ತಿದ್ದ ಏಕೈಕ ಕೈ ಎಂದರೆ, ಅದು ಜಲೀಲ್ ಆಗಿದ್ದರು. ಜಲೀಲ್ ಅವರು ಇದೀಗ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಹೀಗಾಗಿ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. 

ಪ್ರತಿಭಟನಾನಿರತರ ಮೇಲೆ ಗೋಲಿಬಾರ ನಡೆಸದೆಯೇ ಪೊಲೀಸರು ಹಾಗೆಯೇ ನಿಯಂತ್ರಿಸಬಹುದಿತ್ತು. ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದ್ದರು. ಪ್ರತಿಭಟನೆಯಲ್ಲಿ ಭಾಗಿಯೇ ಆಗದ ವ್ಯಕ್ತಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದೀಗ ಜಲೀಲ್ ಕುಟುಂಬಕ್ಕೆ ಸಹಾಯ ಮಾಡಲು ಸ್ನೇಹಿತರೆಲ್ಲರೂ ಒಗ್ಗೂಡಿದ್ದೇವೆ. ಜಲೀಲ್ ಎಂದಿಗೂ ಯಾವುದೇ ಪಕ್ಷದಲ್ಲಾಗಲೀ ಅಥವಾ ಯಾವುದೇ ಸಂಘಟನೆಗಳೊಂದಿಗೂ ಕೈಜೋಡಿಸಿರಲಿಲ್ಲ. ಜಲೀಲ್ ಮೇಲೆ ಗುಂಡಿ ಹಾರಿಸಿದ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಕೆಯಾಗಬೇಕೆಂದು ಜಲೀಲ್ ಸ್ನೇಹಿತ ಜಮೀರ್ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com