ಬೆಂಗಳೂರು: ಲಿವ್ ಇನ್ ಪಾರ್ಟನರ್ ಚಿನ್ನಾಭರಣ ಕದ್ದು ಪರಾರಿಯಾದ ಭೂಪ!  

ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪಾರ್ಟನರ್ ನ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಪಾರ್ಟನರ್ ನ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಮಲ್ಲತ್ತಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂಧ್ಯಾ (ಹೆಸರು ಬದಲಿಸಲಾಗಿದೆ) ನಯನ್ ಅಹ್ಮದ್ ಎಂಬಾತನ ಜೊತೆ ಲಿವಿಂಗ್ ರಿಲೇಶನ್ ಶಿಪ್ ಹೊಂದಿದ್ದಾರೆ. ನಯನ್ ಅಹ್ಮದ್ ಸಂಧ್ಯಾ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದ,  ಆಕೆ ಶಿವಾನಂದ ಸರ್ಕಲ್ ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಆಕೆಯ ಬಳಿ ಎಷ್ಟು ಹಣವಿದೆ, ಎಷ್ಟು ಚಿನ್ನಾಭರಣವಿದೆ ಎಂಬದು ನಯನ್ ಅಹ್ಮದ್ ಗೆ ತಿಳಿದಿತ್ತು. 5 ವರ್ಷದಿಂದ ನಯನ್ ಜೊತೆ ಸಂಧ್ಯಾ ವಾಸಿಸುತ್ತಿದ್ದರು, ನವೆಂಬರ್ 30 ರಿಂದ ತನ್ನ ಸಂಗಾತಿ ಮನೆಗೆ ಬರುತ್ತಿಲ್ಲ, ಸುಮಾರು 12.5 ಲಕ್ಷ ರು ಮೌಲ್ಯದ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಹೋಗಿರುವುದಾಗಿ ಅನ್ನಫೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com