ಬೆಂಗಳೂರು: ಪ್ರೇಯಸಿಯನ್ನು ಖುಷಿ ಪಡಿಸಲು 'ಬಜಾಜ್ ಪಲ್ಸರ್' ಬೈಕ್ ಕದ್ದ ಭೂಪ!

ಮೋಜಿನ ಜೀವನ ನಡೆಸಲು ಹಾಗೂ ಪ್ರೇಯಸಿಯನ್ನು ಖುಷಿ ಪಡಿಸಲು ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಮೋಜಿನ ಜೀವನ ನಡೆಸಲು ಹಾಗೂ ಪ್ರೇಯಸಿಯನ್ನು ಖುಷಿ ಪಡಿಸಲು ದ್ವಿಚಕ್ರವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಪ್ರೇಯಸಿಯನ್ನು ನಂದಿ ಬೆಟ್ಟಕ್ಕೆ ಕರೆದುಕೊಂಡು ಹೋಗುವ ಸಲುವಾಗಿ ಇತ್ತೀಚಿಗೆ ಬಜಾಜ್ ಪಲ್ಸರ್ ಕದ್ದಿದ್ದ ಕಾರ್ತಿಕ್‍(26)ನನ್ನು ಮಾಲು ಸಮೇತ ಬಂಧಿಸಿರುವ ಪೊಲೀಸರು ಆತನಿಂದ 6.15 ಲಕ್ಷ ಬೆಲೆಬಾಳುವ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವಾಹಿತನಾಗಿದ್ದು, ಒಂದು ಮಗುವನ್ನು ಹೊಂದಿರುವ ಆರೋಪಿ, ಬಜಾಜ್ ಪಲ್ಸರನ್ನು ಪ್ರೇಯಸಿ ಜತೆಗೆ ಜಾಲಿ ರೇಡ್‍ಗಾಗಿ ಕದ್ದರೆ, ಉಳಿದ ದ್ವಿಚಕ್ರವಾಹನಗಳನ್ನು ಕದ್ದು, ಮಾರಾಟ ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.
ಈ ಹಿಂದೆಯೂ ಆತ ದ್ವಿಚಕ್ರವಾಹನ ಕಳವಿನ ಆರೋಪದಲ್ಲಿಯೇ ಜೈಲು ಸೇರಿದ್ದ.  ಬಿಡುಗಡೆಯ ನಂತರವೂ ತನ್ನ ಚಾಳಿ ಮುಂದುವರಿಸಿದ್ದ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com