ಬೆಳಗಾವಿ: ಯೋಧರ ರಕ್ತಪಾತದ ನಡುವೆ ಪಾಕಿಸ್ತಾನಕ್ಕೆ ಜೈ ಎಂದ ಶಿಕ್ಷಕಿ, ಮನೆಗೆ ಬೆಂಕಿ ಹಚ್ಚಿದ ಯುವಕರು!

ಉಗ್ರ ದಾಳಿಯಲ್ಲಿ ಭಾರತೀಯ ಯೋಧರ ಬಲಿದಾನದಿಂದಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದಾಗ ಬೆಳಗಾವಿಯ ಶಿಕ್ಷಕಿ ಮಾತ್ರ ಪಾಕಿಸ್ತಾನಕ್ಕೆ ಜೈ ಎಂದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಳಗಾವಿ: ಉಗ್ರ ದಾಳಿಯಲ್ಲಿ ಭಾರತೀಯ ಯೋಧರ ಬಲಿದಾನದಿಂದಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದಾಗ ಬೆಳಗಾವಿಯ ಶಿಕ್ಷಕಿ ಮಾತ್ರ ಪಾಕಿಸ್ತಾನಕ್ಕೆ ಜೈ ಎಂದು ಹೇಳಿದ್ದು ಇದರಿಂದ ಆಕ್ರೋಶಗೊಂಡ ಯುವಕರು ಆಕೆಯ ಮನೆಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. 
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲೇಕಾ ಮಮದಾಪುರ್ ದೇಶದ್ರೋಹಿ ಪೋಸ್ಟ್ ಹಾಕಿದ್ದು ಈಕೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈಕೆ ಫೇಸ್ ಬುಕ್ ಹಾಗೂ ವಾಟ್ಸಪ್ ಗಳಲ್ಲಿ ಪಾಕಿಸ್ತಾನ ಕೀ ಜೈ ಎಂದು ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ವಾಟ್ಸಪ್ ಡಿಪಿಯಲ್ಲೂ ಇದೇ ಫೋಟೋ ಹಾಕಿಕೊಂಡಿದ್ದಾಳೆ. 
ಇದರಿಂದ ರೊಚ್ಚಿಗೆದ್ದ ಕಡಬಿ-ಶಿವಾಪುರ ಗ್ರಾಮದಲ್ಲಿರುವ ಮನೆ ಬಳಿ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಯುವಕರು ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಮನೆಗೆ ಬೆಂಕಿ ಹಚ್ಚಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com