ಬೆಂಗಳೂರು: 15 ವರ್ಷ ಆಯಸ್ಸು ಮುಗಿದ ಪ್ರಯಾಣಿಕ ವಾಹನಗಳು ರಸ್ತೆಗಿಳಿಯುವಂತಿಲ್ಲ!

ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ 15 ವರ್ಷ ಅವಧಿ ಮುಗಿದಿರುವ ಖಾಸಗಿ ಬಸ್ ಗಳನ್ನು ನಿಷೇದಿಸಲು ಸರ್ಕಾರ ಚಿಂತಿಸಿದೆ ಎಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು:  ಪದೇ ಪದೇ ಸಂಭವಿಸುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ 15 ವರ್ಷ ಅವಧಿ ಮುಗಿದಿರುವ  ಖಾಸಗಿ ಬಸ್ ಗಳನ್ನು ನಿಷೇದಿಸಲು ಸರ್ಕಾರ ಚಿಂತಿಸಿದೆ ಎಂದು  ಮೂಲಗಳು ತಿಳಿಸಿವೆ.
ಸರ್ಕಾರಿ ಹಾಗೂ ಖಾಸಗಿ ಬಸ್ ಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿದೆ. ಇದರಿಂದಾಗಿ ಹಲವು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ, ಹೀಗಾಗಿ ಫಿಟ್ನೆಸ್ ಪ್ರಮಾಣ ಪತ್ರ ನೀಡದಿರಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 15 ವರ್ಷ ಅವದಿ ಮುಗಿದಿರುವ ಯಾವುದೇ ಪ್ರಯಾಣಿಕ ವಾಹನಗಳಿಗೆ ಅನುಮತಿ ನವೀಕರಿಸದಿರಲು ನಿರ್ಧರಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಠಿಯಿಂದ ತಾಂತ್ರಿಕವಾಗಿ ಬಲಹೀನವಾಗಿರುವ ವಾಹನಗಳನ್ನು ರಸ್ತೆಗಿಳಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಆರ್ ಟಿ ಓ ಇಲಾಖೆ ತಿಳಿಸಿದೆ. ಹೊಸ ಪ್ರಯಾಣಿಕ ವಾಹನಗಳ ನೋಂದಣಿ ಸಮಯದಲ್ಲಿ ಅವುಗಳ ಅವಧಿಯನ್ನು ಕೇವಲ 15 ವರ್ಷಗಳಿಗೆ ಸೀಮಿತಗೊಳಿಸಿ ಪರವಾನಗಿ ನೀಡಬೇಕೆಂದು ಹೇಳಲಾಗಿದೆ.
ಈಗಾಗಲೇ ಪರವಾನಗಿ ನೀಡಲಾಗಿರುವ ಪ್ರಯಾಣಿಕ ವಾಹನಗಳು, ಮತ್ತೆ ಪರವಾನಗಿ ದಿನಾಂಕವನ್ನು ಬದಲಾಯಿಸಿಕೊಳ್ಳದಿದ್ದರೇ ಅಂತಹ ವಾಹನಗಳ ಪರವಾನಗಿಯನ್ನು ನವೀಕರಿಸದಿರಲು ನಿರ್ದರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com