ಬೆಳಗಾವಿ: ದ್ರಾಕ್ಷಿ ಹಣ್ನನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾದ [ಅರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ನಡೆದಿದೆ.
ಅಥಣಿಯ ಜೇವರ್ಗಿ-ಸಂಕೇಶ್ವರ್ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದರೆ ಇನ್ನೂ ಐವರಿಗೆ ಗಂಭೀರ ಗಾಯಗಳಾಗಿದೆ.
ಸುವರ್ಣ ಧನ್ಯಪ್ಪಗೊಳ, ಮಾದೇವಿ ಪಡಸಲಗಿ ಮತ್ತು ರಾಜು ನೇಸರ ಮೃತ ದುರ್ದೈವಿಗಳಾಗಿದ್ದು ಇವರೆಲ್ಲಾ ವಿಜಯಪುರ ಜಿಲ್ಲೆ ಧನ್ಯಾಳ, ದಾಶ್ಯಾಳ ಹಾಗು ರಾಂಪುರದ ನಿವಾಸಿಗಳಾಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.ಪಲ್ಟಿಯಾಗಿದ್ದ ಟಿಪ್ಪರ್ ಸ್ತೆ ಬದಿಯ ಹಳ್ಳದಲ್ಲಿ ಬಿದ್ದುದ್ದು, ಜೆಸಿಬಿ ಮೂಲಕ ಹೊರತೆಗೆಯಲಾಗಿದೆ.
ಘಟನೆ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.