ನನಗೆ ಟೆನ್ಷನ್ ಇಲ್ಲ, ಸಂಪೂರ್ಣ ನಿರಾಳವಾಗಿದ್ದೇನೆ: ಸಿಎಂ ಕುಮಾರಸ್ವಾಮಿ

ಇಬ್ಬರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ.
ನನಗೆ ಟೆನ್ಷನ್ ಇಲ್ಲ, ಸಂಪೂರ್ಣ ನಿರಾಳವಾಗಿದ್ದೇನೆ:  ಸಿಎಂ ಕುಮಾರಸ್ವಾಮಿ
ನನಗೆ ಟೆನ್ಷನ್ ಇಲ್ಲ, ಸಂಪೂರ್ಣ ನಿರಾಳವಾಗಿದ್ದೇನೆ: ಸಿಎಂ ಕುಮಾರಸ್ವಾಮಿ
Updated on: 
ಬೆಂಗಳೂರು: ಇಬ್ಬರು ಪಕ್ಷೇತರ ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. 
ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ನನಗೆ ಟೆನ್ಷನ್ ಇಲ್ಲ, ಸಂಪೂರ್ಣ ನಿರಾಳವಾಗಿದ್ದೇನೆ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದ್ದಾರೆ. 
ಇಬ್ಬರು ಶಾಸಕರು ಬೆಂಬಲ ವಾಪಸ್ ಪಡೆದರೆ ಸಂಖ್ಯಾಬಲ ಎಷ್ಟಾಗುತ್ತದೆ ಹೇಳಿ? ನಮ್ಮ ಸಂಖ್ಯಾಬಲದ ಬಗ್ಗೆ ನನಗೆ ತಿಳಿದಿದೆ, ನಾನು ನಿರಾಳವಾಗಿದ್ದೇನೆ. ಮಾಧ್ಯಮಗಳಲ್ಲಿ ಕಳೆದ ಒಂದು ವಾರದಿಂದ ಬರುತ್ತಿರುವುದನ್ನು ಎಂಜಾಯ್ ಮಾಡುತ್ತಿದ್ದೇನೆ. ನನಗೆ ಪ್ರತಿ ತಂತ್ರ ಮಾಡುವ ಅಗತ್ಯವಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com