ರಾಜ್ಯ

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

ಇತ್ತೀಚೆಗೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದ ಘಟನೆ ಸುದ್ದಿಯಾಗಿ ಮೌಲ್ಯಗಳು ಪತನವಾಗುತ್ತಿರುವ ಆತಂಕ ಮೂಡಿತ್ತು. ಈಗ ಅಂಥಹದ್ದೇ ಮತ್ತೊಂದು ಆತಂಕ ಮೂಡಿಸುವ ವಿಡಿಯೋ ವೈರಲ್ ಆಗತೊಡಗಿದೆ.

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!
ನೆನ್ನೆ ಮುಚ್ಕೊಂಡು ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ಆವಾಜ್ ಹಾಕಿದ ವಿದ್ಯಾರ್ಥಿ!
Published On :
ಬೆಂಗಳೂರು: ಇತ್ತೀಚೆಗೆ ಮಗನೊಬ್ಬ ತಾಯಿಗೆ ಪೊರಕೆಯಿಂದ ಹೊಡೆದ ಘಟನೆ ಸುದ್ದಿಯಾಗಿ ಮೌಲ್ಯಗಳು ಪತನವಾಗುತ್ತಿರುವ ಆತಂಕ ಮೂಡಿತ್ತು. ಈಗ ಅಂಥಹದ್ದೇ ಮತ್ತೊಂದು ಆತಂಕ ಮೂಡಿಸುವ ವಿಡಿಯೋ ವೈರಲ್ ಆಗತೊಡಗಿದೆ. 
ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿಯೋರ್ವ ಪ್ರಾಧ್ಯಾಪಕಿಗೆ ಕಿಂಚಿತ್ ಗೌರವವನ್ನೂ ತೋರದೇ  ಅಸಭ್ಯ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ. ಶಿಕ್ಷಕರು, ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಗದರಿಸಿ ಸರಿ ದಾರಿಗೆ ತರುವುದು ಸಾಮಾನ್ಯ. ಆದರೆ ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಂಥವರಿಗೂ ಅಘಾತವಾಗುತ್ತದೆ.  ಕರ್ನಾಟಕದ ಕಾಲೇಜಿನ ವಿಡಿಯೋ ಇದಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
"ನೆನ್ನೆ ಮುಚ್ಕೊಂಡು ಕೂತಿದ್ದೆ, ಏಕೆಂದ್ರೆ ಅದು ನಿಮ್ ಕ್ಲಾಸ್, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು" ಎಂದು ವಿದ್ಯಾರ್ಥಿ ಪ್ರಾಧ್ಯಾಪಕಿಗೆ ಆವಾಜ್ ಹಾಕಿದ್ದು, ಇದನ್ನೇ ಮತ್ತೋರ್ವ ವಿದ್ಯಾರ್ಥಿ ವಿಡಿಯೋ ಮಾಡಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ. ವಿದ್ಯಾರ್ಥಿ ಪ್ರಾಧ್ಯಾಪಕಿಗೆ ಆವಾಜ್ ಹಾಕುತ್ತಿದ್ದರೂ ಸಹ ಅದನ್ನು ಆತನ ಸಹಪಾಠಿಗಳು ವಿನೋದದಿಂದ ಆಲಿಸಿ ನಗುತ್ತಿದ್ದರೇ ಹೊರತು ಯಾರೂ ಪ್ರತಿಭಟನೆ ಮಾಡಿಲ್ಲ. 
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು ನಮ್ಮ ಶಿಕ್ಷಣ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬ ಆತಂಕ ವ್ಯಕ್ತವಾಗಿದೆ ಕೇಳಿ ವಿಡಿಯೋ ಶೇರ್ ಆಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.