ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ!

ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನೊಬ್ಬ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ!
ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿಯೇ ಕಂಡಕ್ಟರ್ ಆತ್ಮಹತ್ಯೆ!
Updated on: 
ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನೊಬ್ಬ ಡಿಪೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮೇಲಾಧಿಕಾರಿಗಳ ಕಿರುಕುಳ ತಾಳಲಾಗದೆ ಬೆಳಗಾವಿ ತಾಲೂಕಿನ ಕೆದನೂರು ಗ್ರಾಮದ ಆನಂದ್ ಕೊಲ್ಕಾರ್ (55) ಬೆಳಗಾವಿಯ ಎರಡನೇ ಬಸ್ ಡಿಪೋದಲ್ಲಿ ನೇಣಿಗೆ ಶರಣಾಗಿದ್ದಾನೆ.
ಭಾನುವಾರ ಬೆಳಗಿನ ಜಾವ ನಿತ್ಯದಂತೆ ಚಾಲಕ ನಿರ್ವಾಹಕರು ಎರಡನೇ ಡಿಪೋಗೆ ಕೆಲಸಕ್ಕಾಗಿ ಆಗಮಿಸಿದ ವೇಳ ಪ್ರಕರಣ ಬೆಳಕಿಗೆ ಬಂದಿದೆ.
ಚಾಲಕ, ನಿರ್ವಾಹಕರಿಗೆ ಕರ್ತವ್ಯ ನಿಯೋಜಿಸುವ ಅಧಿಕಾರಿ "ಮುಲ್ಲಾ" ಎಂಬಾತ ಎಲ್ಲಾ ನಿರ್ವಾಹಕರು, ಚಾಲಕರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಮೃತ ನಿರ್ವಾಹಕ ತನ್ನ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.  ತಾನು ಡಿಪೋದಲ್ಲೇ ನೇಣು ಹಾಕಿಕೊಂಡು ಸಾಯುವ ಮೂಲಕ ಇತರೆ ನಿರ್ವಾಹಕರು, ಚಾಲಕರಿಗೆ ಆಗುವ ಕಿರುಕುಳ ತಪ್ಪಬೇಕೆಂದು ಅವರು ಬಯಸಿದ್ದರೆಂದು ಸಹೋದ್ಯೋಗಿಯೊಬ್ಬರು ಅಭಿಪ್ರಾಯಪಟ್ಟರು.
ಮುಲ್ಲಾನನ್ನು ಈ ತಕ್ಷಣ ಅಮಾನತು ಮಾಡಬೇಕು, ಮುಂದಿನ ದಿನಗಳಲ್ಲಿ ಇಂತಹಾ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಡಿಪೋನಲ್ಲಿನ ಚಾಲಕರು, ನಿರ್ವಾಹಕರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com