ಐಎಂಎ ಬಹುಕೋಟಿ ವಂಚನೆ: ಮನ್ಸೂರ್ ಖಾನ್ ನ ಮತ್ತೋರ್ವ ಪ್ರಚಾರಕನ ಬಂಧನ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ನ ಮತ್ತೋರ್ವ ಪ್ರಚಾರಕನನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ನ ಮತ್ತೋರ್ವ ಪ್ರಚಾರಕನನ್ನು ಬಂಧಿಸಿದ್ದಾರೆ.
ಐಎಂಎ ವಂಚನೆ ಪ್ರಕರಣ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ಈ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿ ತಂಡವನ್ನು ರಚಿಸಿದೆ. ಪ್ರಕರಣ ಕೈಗೆತ್ತಿಕೊಂಡಿರುವ ಎಸ್ಐಟಿ ತಂಡ ಅದಾಗಲೇ ಹಲವರನ್ನು ಬಂಧಿಸಿದೆ. 
ಎಸ್ಐಟಿ ಅಧಿಕಾರಿ ಎಸ್ ಗಿರೀಶ್ ಅವರ ನೇತೃತ್ವದ ಎಸ್ಐಟಿ ತಂಡ ಬನ್ನೇರುಘಟ್ಟದಲ್ಲಿ 42 ವರ್ಷದ ಉಮರ್ ಶರೀಫ್ ಎಂಬಾತನನ್ನು ಬಂಧಿಸಿದ್ದು ಜುಲೈ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 
ಕಳೆದ 5 ವರ್ಷಗಳಿಂದ ಐಎಂಎ ಮತ್ತು ಮನ್ಸೂರ್ ಅಲಿ ಖಾನ್ ಅವರ ಪ್ರಚಾರಕನಾಗಿ ಉಮರ್ ಶರೀಷ್ ಕೆಲಸ ಮಾಡುತ್ತಿದ್ದ ಅಲ್ಲದೆ ಬಂಧಿತ ಆರೋಪಿ ಅಲ್ ಬಷೀರ್ ಹೆಸರಿನಲ್ಲಿ ಶಾಲೆಯನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com