ಇನ್ನೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ ಶಿರಾಡಿ ಘಾಟ್

ಮಳೆಗಾಲದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವುದೆಂದರೆ ಘಾಟಿಯಲ್ಲಿ ಯಮಯಾತನೆ...
ಶಿರಾಡಿ ಘಾಟ್
ಶಿರಾಡಿ ಘಾಟ್
ಮಂಗಳೂರು: ಮಳೆಗಾಲದಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವುದೆಂದರೆ ಘಾಟಿಯಲ್ಲಿ ಯಮಯಾತನೆ. ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ವಾಹನ ಸವಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ. 
ಅಡ್ಡಹೊಳೆಯ ಮೂಲಕ ಶಿರಾಡಿ ಘಾಟಿ ಪ್ರವೇಶಿಸುವವರಿಗೆ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಮನಸ್ಸಿಗೆ ಮುದ ನೀಡುತ್ತದೆಯಾದರೂ ಕೂಡ ಗುಂಡ್ಯ ಮತ್ತು ಕೆಂಪು ಹೊಳೆಯ ಕಡಿಮೆಯೆಂದರೂ 5-6 ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಪೂರ್ಣಗೊಂಡಿಲ್ಲ. ಇವುಗಳನ್ನು ಮರಳು ಬ್ಯಾಗ್ ಮತ್ತು ದೊಡ್ಡ ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಹಾಕಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ಬೇರೆ ಜಿಲ್ಲೆಗಳಿಗೆ ಸಂಪರ್ಕಿಸುವುದು ಶಿರಾಡಿ ಘಾಟಿ, ಚಾರ್ಮಾಡಿ ಘಾಟಿ, ಆಗುಂಬೆ ಘಾಟಿ ಮತ್ತು ಸಂಪಾಜೆ ಘಾಟಿಗಳು. ಅವುಗಳಲ್ಲಿ ಶಿರಾಡಿ ಘಾಟಿ ಮೂಲಕ ಭಾರೀ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿರುತ್ತವೆ. 
ಶಿರಾಡಿ ಘಾಟಿ ರಸ್ತೆಯಲ್ಲಿ ಕಾಂಕ್ರಿಟೀಕರಣ ಮಾಡಿದ ನಂತರ ಕಳೆದ ವರ್ಷ ಜುಲೈ 15ರಂದು ಶಿರಾಡಿ ಘಾಟ್ ರಸ್ತೆಯನ್ನು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಉದ್ಘಾಟಿಸಿದ್ದರು. ಕಳೆದ ವರ್ಷ ನವೆಂಬರ್ 15ರಂದು ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com