ಸಂಸತ್ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಜನರಿಗೆ ವಿನಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತಾ, ಸಂಸತ್ ಭವನವನ್ನು ಪ್ರವೇಶಿಸುತ್ತಿದ್ದೇನೆ ಎಂದರು. ಸಂಸತ್ ಭವನ ಬಹುದೊಡ್ಡ ಸಂಸ್ಥೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಹಣೆಬರಹ ನಿರ್ಧಾರವಾಗಿರುವ, ನಿರ್ಧಾರವಾಗಲಿರುವ ಪವಿತ್ರ ಸ್ಥಳವಿದು. ಇಂಥ ಪವಿತ್ರ ಸ್ಥಳದಲ್ಲಿ ಕುಳಿತು ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಆದರ್ಶದೊಂದಿಗೆ ಸಂಸತ್ನ ಒಳಗೆ ಮತ್ತು ಹೊರಗೆ ಹೋರಾಡುವೆ ಎಂದರು.