ಸಾಂದರ್ಭಿಕ ಚಿತ್ರ
ರಾಜ್ಯ
ಮಂಗಳೂರು; 300 ರೌಡಿಗಳನ್ನು ಪರೇಡ್ ನಿಲ್ಲಿಸಿ ಸನ್ನಡತೆ ಹೇಳಿಕೊಟ್ಟ ಪೊಲೀಸರು
ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪೂರ್ವ ಚುನಾವಣಾ ಅಪರಾಧಗಳ ನಿತ್ಯದ ತಪಾಸಣೆ ಭಾಗವಾಗಿ ...
ಮಂಗಳೂರು: ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪೂರ್ವ ಚುನಾವಣಾ ಅಪರಾಧಗಳ ನಿತ್ಯದ ತಪಾಸಣೆ ಭಾಗವಾಗಿ ಸುಮಾರು 300 ರೌಡಿಗಳು ರೌಡಿ ಪರೇಡ್ ನಲ್ಲಿ ಭಾಗಿಯಾಗಿದ್ದರು.
ಮಂಗಳೂರಿನ ಪೊಲೀಸ್ ಪರೇಡ್ ಗ್ರೌಂಡ್ ನಲ್ಲಿ ನಡೆದ ಪರೇಡ್ ನಲ್ಲಿ ಪೊಲೀಸರು ರೌಡಿಗಳಿಗೆ ಉತ್ತಮ ನಡತೆ, ಸನ್ಮಾರ್ಗದ ಬಗ್ಗೆ ತಿಳಿಹೇಳಿದರು.
ಪೊಲೀಸ್ ಠಾಣೆಯ ಆಧಾರದಲ್ಲಿ ರೌಡಿಗಳು ಮೈದಾನದಲ್ಲಿ ಸೇರಿದ್ದು ನಗರ ಸರಹದ್ದಿನ ಎಲ್ಲಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಗಳು, ಎಲ್ಲಾ ಸಹಾಯಕ ಆಯುಕ್ತರು ಪರೇಡ್ ನಲ್ಲಿ ಭಾಗವಹಿಸಿ ರೌಡಿಗಳಿಗ ಬುದ್ಧಿಮಾತು ಹೇಳಿದರು.
''ನಿಮಗಿರುವುದು ಒಂದು ಜೀವನ'', ''ನಿಮ್ಮ ಗುಣನಡತೆಯಿಂದ ನಿಮ್ಮ ಪೋಷಕರು, ಹೆಂಡತಿ ಮತ್ತು ಮಕ್ಕಳು ತಲೆತಗ್ಗಿಸುವ ಕೆಲಸ'' ಮಾಡಿದರೆ ಕುಟುಂಬದಲ್ಲಿ ಜೀವನ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಪೊಲೀಸರು ಬುದ್ಧಿಮಾತು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ