ಮಹಾರಾಷ್ಟ್ರದೊಂದಿಗೆ ಕರ್ನಾಟಕ ಸರ್ಕಾರ 'ನೀರು ವಿನಿಮಯ ಒಪ್ಪಂದ': ಡಿ ಕೆ ಶಿವಕುಮಾರ್

ಕೃಷ್ಣಾ ನದಿ ನೀರನ್ನು ಅವಲಂಬಿಸಿರುವ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಜನರು ...
ಬತ್ತಿ ಹೋಗಿರುವ ಕೃಷ್ಣಾ ನದಿ ನೀರು ಪಾತ್ರ
ಬತ್ತಿ ಹೋಗಿರುವ ಕೃಷ್ಣಾ ನದಿ ನೀರು ಪಾತ್ರ
Updated on: 
ಬೆಳಗಾವಿ: ಕೃಷ್ಣಾ ನದಿ ನೀರನ್ನು ಅವಲಂಬಿಸಿರುವ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಜನರು ಪ್ರತಿ ಬೇಸಿಗೆಯಲ್ಲಿ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರ ಜೊತೆಗೆ ಒಪ್ಪಂದ ಮಾಡಿಕೊಳ್ಳಲಿದೆ.
ಮಹಾರಾಷ್ಟ್ರ ಸರ್ಕಾರದ ನೀರಿಗಾಗಿ ನೀರು ಎಂಬ ಪ್ರಸ್ತಾವನೆಯಡಿ ಎರಡೂ ಸರ್ಕಾರಗಳು ನೀರಿನ ಒಪ್ಪಂದ ಮಾಡಿಕೊಳ್ಳಲಿವೆ ಎಂದು ನೀರಾವರಿ ಖಾತೆ ಸಚಿವ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಮುಖ್ಯ ಎಂಜಿನಿಯರ್ ಗಳ ಸಭೆಯನ್ನು ನಿನ್ನೆ ನೀರಾವರಿ ಖಾತೆ ಸಚಿವ ಡಿ ಕೆ ಶಿವಕುಮಾರ್ ಬೆಳಗಾವಿಯಲ್ಲಿ ಕರೆದಿದ್ದರು.
ಪ್ರತಿವರ್ಷ 4 ಟಿಎಂಸಿ ನೀರನ್ನು ವಿನಿಮಯ ಮಾಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಿಂದ ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರಗಳಿಗೆ ನೀರು ಹರಿಸಲಿದ್ದು ಅದಕ್ಕೆ ಪ್ರತಿಯಾಗಿ ಕರ್ನಾಟಕ ಆಲಮಟ್ಟಿ ಅಣೆಕಟ್ಟೆಯಿಂದ ಮಹಾರಾಷ್ಟ್ರದ ಸೋಲಾಪುರ ಮತ್ತು ಜಾಟ್ ಪ್ರದೇಶಕ್ಕೆ 4 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂಬ ಮಾತುಕತೆಯಾಗಿದೆ ಎಂದು ಸಭೆಯ ಬಳಿಕ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com