5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ! 

ಮತ್ತೋರ್ವ ಹೆಣ್ಣಿನೊಂದಿಗೆ ಸಂಬಂಧ ಹೊಂದಿದ್ದ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆಯನ್ನು ಅಲ್ಲಲ್ಲಿ ನೀವು ಕೇಳಿಯೇ ಇರುತ್ತೀರಿ. ಆದರೆ ಇಲ್ಲೋರ್ವ ಮಹಿಳೆ, ಅಕ್ರಮ ಸಂಬಧ ಹೊಂದಿದ್ದ ಪತಿಯನ್ನು ಮಾರಾಟ ಮಾಡಿದ್ದಾಳೆ! 
5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ!
5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ!
Updated on: 

ಮಂಡ್ಯ: ಮತ್ತೋರ್ವ ಹೆಣ್ಣಿನೊಂದಿಗೆ ಸಂಬಂಧ ಹೊಂದಿದ್ದ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆಯನ್ನು ಅಲ್ಲಲ್ಲಿ ನೀವು ಕೇಳಿಯೇ ಇರುತ್ತೀರಿ. ಆದರೆ ಇಲ್ಲೋರ್ವ ಮಹಿಳೆ, ಅಕ್ರಮ ಸಂಬಧ ಹೊಂದಿದ್ದ ಪತಿಯನ್ನು ಮಾರಾಟ ಮಾಡಿದ್ದಾಳೆ! 

ಈ ವಿಲಕ್ಷಣ ಘಟನೆ ಮಂಡ್ಯದಲ್ಲಿ ನಡೆದಿದ್ದು, ಪ್ರತಿ ಘಟನೆಯಲ್ಲೂ ನಡೆಯುವಂತೆಯೇ ಇಲ್ಲಿಯೂ ಪ್ರಾರಂಭದಲ್ಲಿ ಇಬ್ಬರು ಮಹಿಳೆಯರ ನಡುವೆ ವಾಗ್ವಾದವಾಗಿ ಮಾರಾಮಾರಿ ನಡೆದಿದೆ. ಇಷ್ಟೆಲ್ಲಾ ಆದ ಬಳಿಕ ವಿಷಯವನ್ನು ಪಂಚಾಯ್ತಿಯಲ್ಲಿ ಮೆಟ್ಟಿಲೇರಿದೆ. 

ನನ್ನೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ನನ್ನ ಬಳಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ. ಈ ಹಣವನ್ನು ವಾಪಸ್ ನೀಡಿ ನಿನ್ನ ಗಂಡನನ್ನು ವಾಪಸ್ ಕರೆದುಕೊಂಡು ಹೋಗು ಎಂದು ವ್ಯಕ್ತಿಯ ಪತ್ನಿಗೆ ಪಂಚಾಯ್ತಿಯಲ್ಲಿ ಸವಾಲನ್ನೂ ಹಾಕಿದ್ದಾಳೆ. ಇದನ್ನು ಕೇಳಿದ ಆ ವ್ಯಕ್ತಿಯ ಪತ್ನಿ  ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾಳೆ. ಅಂತಿಮವಾಗಿ ಪತ್ನಿ ತನಗೆ ತನ್ನ ಗಂಡನಿಂದ 5 ಲಕ್ಷ ಜೀವನಾಂಶ ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾಳೆ, ಇದನ್ನು ಕೇಳಿದ ಆರೋಪಿ ಮಹಿಳೆ ತಾನೇ 5 ಲಕ್ಷ ರೂ ನೀಡುತ್ತೇನೆ ಆದರೆ ನಿನ್ನ ಗಂಡನನ್ನು ಬಿಟ್ಟುಬಿಡು ಎಂದು ಷರತ್ತು ಹಾಕಿದ್ದಾಳೆ. ಇದಕ್ಕೆ ಒಪ್ಪಿದ ಮಹಿಳೆ ಮುಂದಿನ ತಿಂಗಳು ಹಣ ಕೊಟ್ಟು ನನ್ನ ಗಂಡನನ್ನು ಖರೀದಿಸಬಹುದೆಂದು ಹೇಳಿದ್ದಾಳೆ.  ಮಹಿಳೆಯರ ಈ ತೀರ್ಮಾನಕ್ಕೆ ಎಲ್ಲರೂ ದಂಗಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com