ಬೆಂಗಳೂರು: 2 ತಿಂಗಳಲ್ಲಿ ಸಿಸಿಬಿಯಿಂದ 81 ದಾಳಿ

ಕೇಂದ್ರೀಯ ಅಪರಾಧ ವಿಭಾಗದ ಅಧಿಕಾರಿಗಳು ಕಳೆದೆರಡು ತಿಂಗಳುಗಳಲ್ಲಿ ಒಟ್ಟು 81 ದಾಳಿಗಳನ್ನು ನಡೆಸಿರುವುದಾಗಿ ಬೆಂಗಳೂರು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಕೇಂದ್ರೀಯ ಅಪರಾಧ ವಿಭಾಗದ ಅಧಿಕಾರಿಗಳು ಕಳೆದೆರಡು ತಿಂಗಳುಗಳಲ್ಲಿ ಒಟ್ಟು 81 ದಾಳಿಗಳನ್ನು ನಡೆಸಿರುವುದಾಗಿ ಬೆಂಗಳೂರು ಪೊಲೀಸರು ಶುಕ್ರವಾರ ಮಾಹಿತಿ ನೀಡಿದ್ದಾರೆ. 

ದಾಳಿ ಕುರಿತಂತೆ ಮಾಹಿತಿ ನೀಡಿರುವ ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು, 2 ತಿಂಗಳುಗಳಲ್ಲಿ ಸಿಸಿಬಿ 81 ದಾಳಿಗಳನ್ನು ನಡೆಸಿದೆ. ದಾಳಿಯಲ್ಲಿ 556 ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ರೂ.2,15,00,000 ಮೌಲ್ಯ ಆಸ್ತಿಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ. 

ಕ್ರಿಕೆಟ್ ಬೆಟ್ಟಿಂಗ್ ದಂಧೆ, ಜೂಜು ಅಡ್ಡೆ, ಲೈವ್ ಬ್ಯಾಂಡ್, ಮಾದಕವ್ಯಸನಗಳ ಅಡ್ಡೆ, ರೌಡಿ ಮನೆಗಳ ಮೇಲೆ ದಾಳೆ, ವೇಶ್ಯವಾಟಿಕೆ ದಂಧೆ, ವೈದ್ಯಕೀಯ ವಂಚನೆ ಪ್ರಕರಣಗಳು, ಶಬ್ದ ಮಾಲೀನ್ಯ ಮಾಡುತ್ತಿದ್ದ ಪಬ್ ಗಳು, ಡಿಸ್ಕೋ ಹಾಗೂ ಹೋಟೆಲ್'ಗಳ ಮೇಲೆಯೇ ಹೆಚ್ಚಿನ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com